ಸಂಸ್ಥೆ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡಿ, ನಿರೀಕ್ಷೆಗೂ ಮೀರಿ ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನಮ್ಮಲ್ಲಿರುವ ಎಲ್ಲ ತರಬೇತುದಾರರು ನುರಿತ ಶಿಕ್ಷಕರಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತವಾಗಿ ಸೇವಾಮನೋಭಾವದಿಂದ ತರಬೇತಿ ನೀಡುತ್ತಾರೆ. ಬೆಳಗ್ಗೆ 6-.30ರಿಂದ 8.-30ರವರೆಗೆ ಹಾಗೂ ಸಂಜೆ 4 ರಿಂದ 6ರವರೆಗೆ ಶಿಬಿರ ನಡೆಯಲಿದೆ. 12 ವರ್ಷ ಮೇಲ್ಪಟ್ಟ ಮಕಳಿಗೆ ಕ್ರಿಕೇಟ್ ತರಬೇತಿ ನೀಡಲಾಗುವುದು. 8ವರ್ಷ ಮೇಲ್ಪಟ್ಟ ಮಕ್ಕಳಿಗೆ ತರಬೇತಿ ನೀಡಲಾಗುವುದು. ಶಿಬಿರದಲ್ಲಿ ಅಥ್ಲೇಟಿಕ್, ಕಬ್ಬಡಿ, ಕರಾಟೆ, ಯೋಗ, ಜಾನಪದ ನೃತ್ಯ, ಥ್ರೋಬಾಲ್, ಕುಂಟೆಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಸೇರಿ ಮುಂತಾದ ಆಟಗಳನ್ನು ಹೇಳಿಕೊಡಲಾಗುವುದು ಎಂದರು.