ತಮ್ಮ ದಿನನಿತ್ಯದ ಓಡಾಟಕ್ಕೆ ಸ್ಕೂಟರ್ ಖರೀದಿಸಿ, ಪಾಲಕರ ಮನೆಗೆ ಅಗತ್ಯ ಪೀಠೋಪಕರಣಗಳನ್ನು ಕೊಡಿಸಿ, ಮ್ಯಾಕ್‌ಬುಕ್ ಹಾಗೂ ಸ್ಮಾರ್ಟ್‌ಫೋನ್ ಕೊಂಡುಕೊಂಡಿರುವ ಈ ಟೆಕ್ಕಿ, ಇತ್ತೀಚೆಗೆ ಪಾಲಕರಿಗೆ ಆರೋಗ್ಯ ವಿಮೆ ಹಾಗೂ ತಮಗೆ ಜೀವ ವಿಮೆಯನ್ನೂ ಮಾಡಿಸಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವುದಕ್ಕೆ ಹೆಮ್ಮೆ ಇದೆಯಾದರೂ, ತಮಗೆಂದೂ ತಾನು ಶ್ರೀಮಂತ ಎನಿಸಿಯೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವರ್ಷ ಮದುವೆಯಾಗುವ ಯೋಜನೆಯಿದ್ದು, ಅದಕ್ಕಾಗಿ ಕನಿಷ್ಠ 10 ಲಕ್ಷ ರೂ. ಖರ್ಚಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು, ಹುಟ್ಟೂರಿನಲ್ಲಿ ನಿವೇಶನ ಹಾಗೂ ಹೊಸ ಬೈಕ್ ಕೊಳ್ಳುವ ಆಸೆಯೂ ಅವರಿಗಿದೆ. ಆದರೆ ಹಣದ ಕೊರತೆಗಿಂತ ಹೆಚ್ಚಾಗಿ ಎಲ್ಲವನ್ನೂ ಒಮ್ಮೆಗೆ ಪಡೆಯಲು ಸಾಧ್ಯವಿಲ್ಲ ಎನ್ನುವ ಭಾವನೆ ಮತ್ತು ಒಂದರ ಖರೀದಿಯು ಮತ್ತೊಂದು ಕನಸನ್ನು ಕೈಬಿಡುವಂತೆ ಮಾಡುತ್ತಿದೆ ಎಂಬ ಆತಂಕ ಆ ಟೆಕ್ಕಿಯನ್ನು ಕಾಡುತ್ತಿದೆಯಂತೆ.