ರಾಜ್ಯದಲ್ಲಿ ತಗ್ಗಿದ ಡೆಂಘೆ

ರಾಜ್ಯದಲ್ಲಿ ತಗ್ಗಿದ ಡೆಂಘೆ
ರಾಜ್ಯದಲ್ಲಿ ತಗ್ಗಿದ ಡೆಂಘೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಡೆಂಘೆ ಪ್ರಕರಣಗಳ ಇಳಿಕೆ
  • ಕಳೆದ ವರ್ಷ 32 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ
  • ಆರೋಗ್ಯ ಇಲಾಖೆಯ ಕ್ರಮಗಳಿಂದಾಗಿ ತಗ್ಗಿದ ಡೆಂಘೆ
ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ಶೇ.81 ತಗ್ಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, 2024ರಲ್ಲಿ 32 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿ 24 ಮಂದಿ ಮೃತಪಟ್ಟಿದ್ದರು. ಈ ವರ್ಷ ಜನವರಿಯಿಂದ ಈವರೆಗೆ 6,595 ಪ್ರಕರಣ ದೃಢಪಟ್ಟಿದ್ದು, ಮರಣ ಪ್ರಕರಣ ವರದಿಯಾಗಿಲ್ಲ.
ಈ ವರ್ಷ 1.99 ಲಕ್ಷಕ್ಕೂ ಅಧಿಕ ಶಂಕಿತರನ್ನು ಗುರುತಿಸಲಾಗಿದೆ. ಅವರಲ್ಲಿ 96,462 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೃಢ ಪ್ರಕರಣಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿಯೇ 3,213 ಪ್ರಕರಣಗಳು ವರದಿಯಾಗಿವೆ. ಉಳಿದ ಪ್ರದೇಶಗಳಿಂದ 3,382 ಪ್ರಕರಣಗಳು ದೃಢಪಟ್ಟಿವೆ.
ಕಲಬುರಗಿ (450), ತುಮಕೂರು (206), ದಕ್ಷಿಣ ಕನ್ನಡ (175), ಬೆಂಗಳೂರು ನಗರ (169), ವಿಜಯಪುರ (168), ಬಳ್ಳಾರಿ (165), ಕೋಲಾರ (153), ಉಡುಪಿ (150), ಧಾರವಾಡ (149), ರಾಮನಗರ (145), ಶಿವಮೊಗ್ಗ (140) ಸೇರಿ ಇತರ ಜಿಲ್ಲೆಗಳಲ್ಲೂ ನೂರಾರು ಮಂದಿ ಡೆಂಘೆಯಿಂದ ಬಳಲಿದ್ದಾರೆ.
ಜಾಗೃತಿ ಮೂಡಿಸುವುದು ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳಿಂದ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಚಿಕೂನ್ ಗುನ್ಯಾ:

ರಾಜ್ಯದಲ್ಲಿ 974 ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿವೆ. 44 ಸಾವಿರ ಶಂಕಿತರಲ್ಲಿ, 21 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರ (153), ವಿಜಯಪುರ (148) ಮತ್ತು ಜಿಬಿಎ (119) ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಡಗು ಮೂರು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಪ್ರಕರಣಗಳು ವರದಿಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net