ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಅನುದಾನ ನೀಡಬಾರದು ಎಂದು ಒತ್ತಾಯಿಸಿ ಗಡಿನಾಡು ಕನ್ನಡಿಗರ ಸೇನೆ ಕಾರ್ಯಕರ್ತರು ಮಂಗಳವಾರ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಭಟಿಸಿದರು. ಬಲರಾಮ ಮಾಸೇನಟ್ಟಿ, ಸಂತೋಷ ತಳ್ಳಿಮನಿ, ಆನಂದ ಬಿಲಾವರ ಇತರರಿದ್ದರು.
Published on:
Copied
Follow Us
ಬೆಳಗಾವಿ: ಕರ್ನಾಟಕದ ಪರವಾಗಿ ಗಟ್ಟಿಯಾಗಿ ನಿಲ್ಲದ ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಬಾರದು ಎಂದು ಒತ್ತಾಯಿಸಿ ಗಡಿನಾಡು ಕನ್ನಡಿಗರ ಸೇನೆ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈಚೆಗೆ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿ ಪಾಲಿಕೆಗೆ 250 ಕೋಟಿ ರೂ.ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಪಾಲಿಕೆಯಲ್ಲಿ ಕರ್ನಾಟಕದ ಪರವಾಗಿ ಗೊತ್ತುವಳಿ ಅಂಗೀಕರಿಸಬೇಕೆಂದು ಕನ್ನಡಪರ ಸಂಘಟನೆಗಳು ಹಲವು ದಿನದಿಂದ ಒತ್ತಾಯಿಸುತ್ತಿವೆ. ಆದರೆ, ಕನ್ನಡಪರ ನಿರ್ಣಯ ತೆಗೆದುಕೊಳ್ಳದೆ ನಾಡದ್ರೋಹದ ಕೆಲಸ ಮಾಡಿರುವ ಮೇಯರ್ ಹಾಗೂ ಉಪ ಮೇಯರ್ ಅನುದಾನ ಕೇಳಿರುವುದು ನಾಚಿಕೆಗೇಡಿತನವಾಗಿದೆ.