ಹುಮನಾಬಾದ್ನಲ್ಲಿ ಸೋಮವಾರ ಪ್ರೌಢ ಶಾಲಾ ಶಿಕರ ಸಂದಿಂದ ಎಸ್ಸೆಸ್ಸೆಲ್ಸಿ ಅಂಕಗಳ ಪಟ್ಟಿಯಿಂದ ಹಿಂದಿ ವಿಷಯ ಹೊರಗಿಡುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಜಿಲ್ಲಾಧ್ಯ ಶೇಖ್ ಮಹೆಬೂಬ್ ಪಟೇಲ್, ಆನಂದ ಶಿವನಾಯಕ, ಡಾ.ಸಾರಿಕಾ ಗಂಗಾ, ಸೋಮನಾಥ ಗ್ಯಾನಪ್ಪ ಇತರರಿದ್ದರು.
ಹುಮನಾಬಾದ್ನಲ್ಲಿ ಶಿಕ್ಷಕರ ಸಂಘದಿಂದ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಅವರಿಗೆ ಮನವಿ
ಹುಮನಾಬಾದ್ :ಎಸ್ಸೆಸ್ಸೆಲ್ಸಿ ಅಂಕಗಳ ಪಟ್ಟಿಯಿಂದ ಹಿಂದಿ ವಿಷಯ ಹೊರಗಿಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವುದನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಪಟ್ಟಣದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಿ, ಸರ್ಕಾರ ಹಾಗೂ ಶಾಲಾ ಶಿಣ ಹಾಗೂ ಸಾರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಬಗ್ಗೆ ಒತ್ತಡ ಹೇರಿವಂತೆ ಮನವಿ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷಯ ಒಟ್ಟಾರೆ 625 ಅಂಕಗಳ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ವಿಷಯದ ಅಂಕಗಳನ್ನು ಅಂಕಪಟ್ಟಿಯಲ್ಲಿ ಗ್ರೇಡ್ ಆಧಾರದಲ್ಲಿ ನಮೂದಿಸುವುದು ರಾಜ್ಯದಲ್ಲಿ ಇದುವರೆಗೂ ಹಿಂದಿ ಅಭ್ಯಾಸ ಮಾಡಿಕೊಂಡು ಬಂದಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಮನೆ ಮಾಡಿದೆ. ಸದರಿ ವಿಷಯವಾಗಿ ಪ್ರೌಢಶಾಲಾ ಹಿಂದಿ ಶಿಕ್ಷರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ವೃತ್ತಿಗೆ ಧಕ್ಕೆ ಬಾರದಂತೆ ಅಂಕಗಳನ್ನು ಕ್ರೂಢಿಕರಿಸುವಾಗ ತೃತೀಯ ಭಾಷೆ ಹಿಂದಿ ಪರಿಗಣಿಸದೇ ಇರುವ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಶೇಖರ ಪಾಟೀಲ್, ಹಿಂದಿ ಭಾಷೆಯ ಅಂಕದ ಕುರಿತು ಶಿಣಕ್ಷ ಸಚಿವರು ಹಾಗೂ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯ ಶೇಖ್ಮಹೆಬೂಬ್ ಪಟೇಲ್, ತಾಲೂಕು ಅಧ್ಯಕ್ಷ ಆನಂದ ಶಿವನಾಯಕ, ಪ್ರಧಾನ ಕಾರ್ಯದರ್ಶಿ ಡಾ.ಸಾರಿಕಾ ಗಂಗಾ, ಮನೋಜ ಪಾಟೀಲ್, ಅಬ್ದುಲ್ ಸಾಬ್ ತಾಂಬೆ, ಸೈಯದ್ ಕಲೀಮ್, ನಂದಕುಮಾರ ಮರೂರ, ಸೋಮನಾಥ ಗ್ಯಾನಪ್ಪ ಇತರರಿದ್ದರು.