ಶಾಸಕ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ

    ವಿವಿಧ ಮಠಾಧೀಶರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಶಿವಾನಂದ ಪಾಟೀಲರನ್ನು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿ, ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸನ್ಮಾನಿಸಿದರು. ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ ಶ್ರೀಗಳು, ಚಬನೂರಿನ ರಾಮಲಿಂಗ ಶ್ರೀಗಳು, ಮಸೂತಿಯ ಪ್ರಭು ಕುಮಾರ ಶಿವಾಚಾರ್ಯ ಶ್ರೀಗಳು ಇತರರಿದ್ದರು.
ವಿವಿಧ ಮಠಾಧೀಶರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಶಿವಾನಂದ ಪಾಟೀಲರನ್ನು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿ, ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸನ್ಮಾನಿಸಿದರು. ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ ಶ್ರೀಗಳು, ಚಬನೂರಿನ ರಾಮಲಿಂಗ ಶ್ರೀಗಳು, ಮಸೂತಿಯ ಪ್ರಭು ಕುಮಾರ ಶಿವಾಚಾರ್ಯ ಶ್ರೀಗಳು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಮಠಾಧೀಶರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ
  • ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸನ್ಮಾನ
ಬಸವನಬಾಗೇವಾಡಿ: ಶಾಸಕ ಶಿವಾನಂದ ಪಾಟೀಲವರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕಿನ ಮಠಾಧೀಶರು ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಭೇಟಿ ನೀಡಿ, ಸಚಿವ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಹಿರಿಯ ಶಾಸಕ ಶಿವಾನಂದ ಪಾಟೀಲ ಅವರು ಅತ್ಯಂತ ಅನುಭವಿ ಶಾಸಕರಾಗಿದ್ದು. ಜಿಲ್ಲೆಯ ಅಭಿವೃದ್ಧಿಯೊಂದಿಗೆ ಅವರಿಗೆ ನೀಡಿರುವ ಯಾವುದೇ ಖಾತೆ ನೀಡಿದರೂ ಕೂಡ ಆ ಖಾತೆಗೆ ಒಂದು ಹೊಸ ರೂಪ ನೀಡಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ತಮಗೆ ನೀಡಿರುವ ಖಾತೆಯಲ್ಲಿ ಹೊಸತನ ತರುವಂತ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಶಾಸಕರಿಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೆ ಸರ್ಕಾರದ ವೇಗಕ್ಕೆ ಇನ್ನಷ್ಟು ಸಹಕಾರವಾಗುತ್ತದೆ.
ಯಾವುದೇ ಜಾತಿ, ಧರ್ಮ, ಭೇದ ಭಾವವಿಲ್ಲದೆ ಅಣ್ಣ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ರೈತರು, ಕಾರ್ಮಿಕರು, ಸರ್ವ ಜನಾಂಗದ ಅಭಿವೃದ್ಧಿಗೆ ತಮ್ಮ ರಾಜಕೀಯ ಉದ್ದಕ್ಕೂ ಕೆಲಸ ಮಾಡುತ್ತಾ ಬಂದಿರುತ್ತಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಾಗೂ ತಮಗೆ ನೀಡಿರುವ ಮೂರು ಖಾತೆಕ್ಕೆ ಜೀವತುಂಬಿ. ರಾಜ್ಯದಲ್ಲಿ ರೈತರಿಗೆ ಕಬ್ಬಿನ ಸಮಸ್ಯೆಯಾದಗ ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹರಿಸಿದ್ದಾರೆ.
ಹಿಂದೆ ಆರೋಗ್ಯ ಸಚಿವರಾಗಿದ್ದಾಗ ವಿಜಯಪುರ ನಗರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಮಾಡಿ ಜಿಲ್ಲೆಗಲ್ಲದೆ ಪಕ್ಕದ ಮಹಾರಾಷ್ಟ್ರದ ಜಿಲ್ಲೆಯವರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಬಾಗಲಕೋಟೆ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಮ್ಮ ಕೆಲಸ ಕಾರ್ಯವನ್ನು ಮಾಡಿದ್ದಾರೆ.
ಅದರಿಂದ ಇಂಥ ಅನುಭವಿವುಳ್ಳ ಕಿರಿಯ ಶಾಸಕರಾದ ಶಿವಾನಂದ ಪಾಟೀಲವರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕಿನ ವಿವಿಧ ಮಠಾಧೀಶರ ಒತ್ತಾಯವಲ್ಲದೆ ಇಡೀ ಜಿಲ್ಲೆಯ ಮಠಾಧೀಶರ ಆಶಯ ಕೂಡ ಇದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ವಿವಿಧ ಮಠಾಧೀಶರು ಭೇಟಿಯಾಗಿ ಮನವಿ ಸಲ್ಲಿಸಿ. ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸನ್ಮಾನಿಸಿದ್ದಾರೆ.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು, ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಮಸಿಬಿನಾಳದ ವಿರಕ್ತಮಠದ ಸಿದ್ಧರಾಮ ಶ್ರೀಗಳು ಮಾತನಾಡಿ, ಸಿಎಂ ಡಿ.ಕೆ. ಶಿವಕುಮಾರ ಅವರು ಮನವಿ ಸ್ವೀಕರಿಸಿ ತಮ್ಮ ಬೇಡಿಕೆಯನ್ನು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಭೇಟಿ ನಿಯೋಗದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರಾದ ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ ಶ್ರೀಗಳು, ಚಬನೂರಿನ ರಾಮಲಿಂಗ ಶ್ರೀಗಳು, ಮಸೂತಿಯ ಪ್ರಭು ಕುಮಾರ ಶಿವಾಚಾರ್ಯ ಶ್ರೀಗಳು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಕಲಕೇರಿಯ ಸಿದ್ಧರಾಮ ಶ್ರೀಗಳು, ನಾವದಗಿಯ ಗಜೇಂದ್ರ ಶ್ರೀಗಳು, ದೇವರಹಿಪ್ಪರಗಿಯ ಶಿವಯೋಗಿ ಶ್ರೀಗಳು, ಪಡಕನೂರದ ಚನ್ನಮಲ್ಲಿಕಾರ್ಜುನ ಶ್ರೀಗಳು, ವಡವಡಿಗಿಯ ವೀರಸಿದ್ಧ ಶಿವಾಚಾರ್ಯ ಶ್ರೀಗಳು, ಕಲಿಕೇರಿಯ ಮಡಿವಾಳೇಶ್ವರ ಶ್ರೀಗಳು, ಕೊರವಾರದ ಕಾಶಿಲಿಂಗ ಶ್ರೀಗಳು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net