ಕಣಬರ್ಗಿ ವಸತಿ ಯೋಜನೆ ತನಿಖೆಗೆ ಆಗ್ರಹ

ಕಣಬರ್ಗಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ರೈತರು ಮತ್ತು ಬುಡಾ ಮಧ್ಯೆ ಇರುವ ವಿವಾದ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಭೆ ನಡೆಸಿದರು. ಶಿವಾಜಿ ಸುಂಠಕರ, ಪ್ರಕಾಶ ನಾಯಕ, ಬಬನ್ ಮಾಲಾಯಿ ಇತರರಿದ್ದರು.
ಕಣಬರ್ಗಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ರೈತರು ಮತ್ತು ಬುಡಾ ಮಧ್ಯೆ ಇರುವ ವಿವಾದ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಭೆ ನಡೆಸಿದರು. ಶಿವಾಜಿ ಸುಂಠಕರ, ಪ್ರಕಾಶ ನಾಯಕ, ಬಬನ್ ಮಾಲಾಯಿ ಇತರರಿದ್ದರು.
Published on

ಬೆಳಗಾವಿ: ಕಣಬರ್ಗಿಯ ವಸತಿ ಯೋಜನೆ 61ರ ಆರ್‌ಟಿಸಿ ಪಹಣಿಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಹೆಸರು ದಾಖಲಾಗಿದೆ. ಆದರೂ ಮಧ್ಯವರ್ತಿಗಳ ಮೂಲಕ ಅಕ್ರಮವಾಗಿ ಜಮೀನು ಖರೀದಿ ಮಾಡುತ್ತಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಬೇಕು. 15 ಎಕರೆ ಫಲವತ್ತಾದ ಜಮೀನಿನ ಮೇಲೆ ಇರುವ ಬುಡಾ ಹೆಸರು ತೆಗೆದುಹಾಕಬೇಕು ಎಂದು ಸ್ಥಳೀಯ ರೈತರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತರ ಮನವಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಣಬರ್ಗಿ ರೈತರ ಸಭೆ ನಡೆಸಿ, ಅಹವಾಲು ಆಲಿಸಿ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಅಧಿಖಾರಿಗಳು, ರೈತರಿಗೆ ಸೂಚಿಸಿದರು.
ಸಭೆಯಲ್ಲಿ ರೈತರ ಪರವಾಗಿ ಮಾಜಿ ಮಹಾಪೌರ ಶಿವಾಜಿ ಸುಂಠಕರ, ಪ್ರಕಾಶ ನಾಯಕ ಮಾತನಾಡಿ, 2007ರಿಂದ ಕಣಬರ್ಗಿ ಯಲ್ಲಿ ವಸತಿ ಯೋಜನೆ 61ಕ್ಕಾಗಿ ಭೂಸ್ವಾಧೀನ ನಡೆಸಲಾಗುತ್ತಿದೆ. ಈ ಯೋಜನೆಯನ್ನು ರೈತರು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ರೈತರ ಪರವಾಗಿ ತೀರ್ಪು ನೀಡಿದೆ.
ಆದರೂ ಈ ಯೋಜ ನೆಗಾಗಿ ಹೆಚ್ಚುವರಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಬುಡಾ ಮುಂದಾಗಿದೆ. 15 ಎಕರೆ ಜಮೀನಿನ ಮೇಲೆ ಕಾನೂನುಬಾಹಿರವಾಗಿ ತಮ್ಮ ಹೆಸರು ಸೇರಿಸಿದ್ದಾರೆ. ಜಮೀನಿನ ಮೇಲೆ ಬುಡಾ ಹೆಸರು ಇದ್ದರೂ, ಸುಮಾರು 80 ಎಕರೆಯಷ್ಟು ಜಮೀನನ್ನು ಏಜೆಂಟರಿಂದ ಖರೀದಿಸಲಾಗಿದೆ. ಇದರಲ್ಲಿ ಉಪನೋಂದಣಿ ಕಚೇರಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಬನ್ ಮಾಲಾಯಿ, ಎಡಿಸಿ ವಿಜಯಕುಮಾರ ಹೊನಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net