ನೂತನ ರೈಲು ಮಾರ್ಗಕ್ಕೆ ಒತ್ತಾಯ

ವಿವಿಧ ಸಂಟನೆಗಳ ಮುಖಂಡರು ರಾಮದುರ್ಗದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು. ಬಿ.ಯು.ಬೈರಕರಾದ, ಡಿ.ಎ್​.ಹಾಜಿ ಇತರರಿದ್ದರು.
ವಿವಿಧ ಸಂಟನೆಗಳ ಮುಖಂಡರು ರಾಮದುರ್ಗದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು. ಬಿ.ಯು.ಬೈರಕರಾದ, ಡಿ.ಎ್​.ಹಾಜಿ ಇತರರಿದ್ದರು.
Published on
ರಾಮದುರ್ಗ: ಐತಿಹಾಸಿಕ ೇತ್ರ ರಾಮದುರ್ಗ, ಸವದತ್ತಿ ತಾಲೂಕಿಗೆ ಸಂಪರ್ಕ ಕಲ್ಪಿಸಲು ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಒತ್ತಾಯಿಸಿ, ರೈಲ್ವೆ ಹೋರಾಟ ಸಮಿತಿ ಸೇರಿ ವಿವಿಧ ಸಂಟನೆ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನಸೌಧ ಎದುರು ಸಂಚಾರ ತಡೆದು ಪ್ರತಿಭಟಿಸಲಾಯಿತು. ಲೋಕಾಪುರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ, ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ. ನಗರದಲ್ಲಿ ರಸ್ತೆ, ಕುಡಿಯುವ ನೀರು, ಮಹಾದಾಯಿ ನದಿ ಜೋಡಣೆ ಸೇರಿ ವಿವಿಧ ಕಾಮಗಾರಿ ಸರ್ಕಾರ ಸಮಯಕ್ಕೆ ಸರಿಯಾಗಿ ಕೈಗೊಳ್ಳುತ್ತಿಲ್ಲ. ಶ್ರೀ ಉಭಯ ಸರ್ಕಾರ ಜಂಟಿಯಾಗಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನ್ಯಾಷನಲ್​ ಹ್ಯೂಮನ್​ ರೈಟ್ಸ್​ ಸಂಟನೆ ರಾಜ್ಯಾಧ್ಯ ಬಿ.ಯು.ಬೈರಕರಾದ, ಶಬರಿ ಎಕ್ಸ್​ಪ್ರೆಸ್​ ರೈಲು ಸಮಿತಿಯ ಡಿ.ಎ್​.ಹಾಜಿ, ಸಿ.ಎಸ್​.ಹಿರೇಮಠ, ಎನ್​.ಎ.ಅಕ್ಕೋಜಿ, ಸುಹಾಸ್​ ಬಾರ್ಕಿ, ಶ್ರೇಯಸ ವಾಲಿ, ಶಿವಾನಂದ ಮಿಲಾನಿ, ಡಾ.ಬಸವರಾಜ ಮಾದನ್ನವರ, ವಕೀಲೆ ರಾಜೇಶ್ವರಿ ಮೆಟಗುಡ್ಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net