ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗದಿಂದ ಈಚೆಗೆ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮ ಜರುಗಿತು. ಡಾ. ಕರ್ನಲ್ ದಯಾನಂದ, ಡಾ.ಮಲ್ಲಿಕಾರ್ಜುನ ಕರಿಶೆಟ್ಟಿ , ಡಾ.ಮಾಧವ ಪ್ರಭು, ಡಾ.ರಿತೇಶ ವೆರ್ಣೇಕರ, ಡಾ.ರವಿ ಸರ್ವಿ, ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಖರ ಸೋಮನಟ್ಟಿ ಇತರರಿದ್ದರು.
ಬೆಳಗಾವಿ: ಸಾರ್ವಜನಿಕರಿಗೆ ಕಿಡ್ನಿ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಕೆಎಲ್‌ಇ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ದಯಾನಂದ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗದಲ್ಲಿ ಈಚೆಗೆ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವುದೊಂದೇ ಪರಿಹಾರ. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಶೋಧನೆ ನಡೆದು ಕಿಡ್ನಿ ರೋಗಿಗಳ ತೊಂದರೆ ತಪ್ಪಿಸಲು ಪ್ರಯತ್ನಿಸಬೇಕು. ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದಲ್ಲಿನ ಹರಳು ಹಾಗೂ ಮೂತ್ರನಾಳದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹಿರಿಯ ನೆಪ್ರಲಾಜಿಸ್ಟ್ ಡಾ.ಮಲ್ಲಿಕಾರ್ಜುನ ಕರಿಶೆಟ್ಟಿ ಮಾತನಾಡಿ, ನಾಲಿಗೆ ರುಚಿ ನೋಡಿದರೆ ಕಿಡ್ನಿ ಹಾಳಾಗುವ ಸಾಧ್ಯತೆ ಹೆಚ್ಚು. ಬಿಪಿ, ಕೊಬ್ಬು, ಡಯಾಬಿಟಿಸ್ ನಿಯಂತ್ರಣದಲ್ಲಿಡಿ, ವೈದ್ಯರ ಸಲಹೆ ಇಲ್ಲದೆ ಔಷಧ ಸೇವಿಸಬೇಡಿ ಎಂದರು.