ಗೋವಧೆ, ಗೋಮಾಂಸ ಮಾರಾಟ ನಿಷೇಧಕ್ಕೆ ಪಟ್ಟು / SULIBELE

ಸೂಲಿಬೆಲೆ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋವಧೆ ಹಾಗೂ ಗೋಮಾಂಸ ಮಾರಾಟ ಚಟುವಟಿಕೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಮಸೀದಿಗಳ ಮುಖ್ಯಸ್ಥರು ಸೂಲಿಬೆಲೆ ಸರ್ಕಲ್​ ಇನ್​ಸ್ಪೆಕ್ಟರ್​ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ಮುಖಂಡ ಅಕ್ಬರ್​ ಅಲಿಖಾನ್​, ಚೌಕ್​ ಮಸೀದಿ ಅಧ್ಯಕ್ಷ ಮೌಲ, ಮುಬಾರಕ್​ ಮಸೀದಿ ಅಧ್ಯಕ್ಷ ದೌಲತ್​, ಜಾಮಿಯ ಮಸೀದಿ ಅಧ್ಯಕ್ಷ ಅಪೋಜ್​ ಪಾಷ ಇತರರು ಇದ್ದರು.
ಸೂಲಿಬೆಲೆ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋವಧೆ ಹಾಗೂ ಗೋಮಾಂಸ ಮಾರಾಟ ಚಟುವಟಿಕೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಮಸೀದಿಗಳ ಮುಖ್ಯಸ್ಥರು ಸೂಲಿಬೆಲೆ ಸರ್ಕಲ್​ ಇನ್​ಸ್ಪೆಕ್ಟರ್​ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ಮುಖಂಡ ಅಕ್ಬರ್​ ಅಲಿಖಾನ್​, ಚೌಕ್​ ಮಸೀದಿ ಅಧ್ಯಕ್ಷ ಮೌಲ, ಮುಬಾರಕ್​ ಮಸೀದಿ ಅಧ್ಯಕ್ಷ ದೌಲತ್​, ಜಾಮಿಯ ಮಸೀದಿ ಅಧ್ಯಕ್ಷ ಅಪೋಜ್​ ಪಾಷ ಇತರರು ಇದ್ದರು.
Published on
ಸೂಲಿಬೆಲೆ : ಸೂಲಿಬೆಲೆ ಗ್ರಾಮದಲ್ಲಿ ಗೋವಧೆ ಹಾಗೂ ಅಕ್ರಮ ಗೋಮಾಂಸ ಮಾರಾಟ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಪೊಲೀಸ್​ ಇಲಾಖೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೂಲಿಬೆಲೆ ಗ್ರಾಮದ ಮಸೀದಿಗಳ ಮುಖ್ಯಸ್ಥರು ಸರ್ಕಲ್​ ಇನ್​ಸ್ಪೆಕ್ಟರ್​ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಎಲ್ಲ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಜೀವಿಸುತ್ತಿದ್ದು ಪರಸ್ಪರ ಸ್ನೇಹದಿಂದ ಇದ್ದಾರೆ. ಆದರೆ, ಗೋಮಾಂಸ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದವರ ವ್ಯಕ್ತಿ ಕೊಲೆಯಿಂದ ಗ್ರಾಮದಲ್ಲಿ ಜನ ಭಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಜನರಿಗೆ ಅಭಯ ನೀಡಬೇಕು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯಾವುದೇ ವ್ಯಕ್ತಿಯ ಗೋಮಾಂಸ ಮಾರಾಟ ಮಾಡುವಂತಿಲ್ಲ ಎಂಬುದಾಗಿ ಗ್ರಾಮದ 7 ಮಸೀದಿಗಳಲ್ಲಿ ನಿರ್ಧರಿಸಿ ಆದೇಶಿಸಲಾಗಿದೆ. ಗೋಮಾಂಸ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಾಪಾರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗೋಮಾಂಸ ಮಾರಾಟ ಅಂಗಡಿಗಳನ್ನು ಸೂಲಿಬೆಲೆ ಗ್ರಾಮದಲ್ಲಿ ಶಾಶ್ವತವಾಗಿ ಮುಚ್ಚಿಸಬೇಕು ಎಂದು ಜಾಮೀಯ ಮಸೀದಿಯಅಹೀಲ್​ ಸುನತುಲ್ಲಾಜಮಾತ್​ ಅಧ್ಯಕ್ಷ ಅಪೋಜ್​ ಪಾಷ ಆಗ್ರಹಿಸಿದ್ದಾರೆ.
ಇತ್ತೀಚಿಗೆ ಕೊಲೆಯಾದ ಕಲಿಂ ಅವರ ಸಾವಿಗೆ ನ್ಯಾಯಸಿಗಬೇಕು. ಆ ವ್ಯಕ್ತಿಯ ಸಾವಿಗೆ ಕಾರಣ ಎನ್ನಲಾದ ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ವಿನಾಯಿತಿ ಸಿಗಬಾರದು, ಕಠಿಣ ಶಿೆಯಾಗಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಪರಿಶೀಲಿಸಿ ಕ್ರಮ : ಮನವಿ ಸ್ವೀಕರಿಸಿದ ಸರ್ಕಲ್​ ಇನ್ಸ್​ಪೆಕ್ಟರ್​ ರಾಜಣ್ಣ ಮಾತನಾಡಿ, ಸೂಲಿಬೆಲೆ ಗ್ರಾಮದಲ್ಲಿ ಅಕ್ರಮವಾಗಿ ಗೋವಧೆ ಮತ್ತು ಗೋ ಮಾಂಸ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಪರವಾನಗಿ ಪಡೆದು ವ್ಯಾಪಾರ ಮಾಡಲು ಅವಕಾಶವಿದೆಯೇ ಹೇಗೆ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಉಮರ್​ ಮಸೀದಿ ಅಧ್ಯಕ್ಷ ಪಯಾಜ್​, ನಯಾಜ್​ ಪಾಷ, ನಸೀರ್​ ಪಾಷ, ಸಲ್ಮಾನ್​, ಸಾದಿಕ್​, ಇಸಾಕ್​ ಪಾಷ, ಸಿಮೆಂಟ್​ ನಾಸೀರ್​ ಖಾನ್​, ರಫಿ, ಮಸೀದಿ ಪದಾಧಿಕಾರಿಗಳು ಇತರರು ಇದ್ದರು.

ಸೂಲಿಬೆಲೆ ಗ್ರಾಮದ 1ನೇ ವಾರ್ಡ್​ನಲ್ಲಿ ತಡರಾತ್ರಿ ಕಬಾಬ್​ ಅಂಗಡಿಗಳನ್ನು ನಡೆಸುವುದು ಹಾಗೂ ಕುಡುಕರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಪೊಲೀಸ್​ ಇಲಾಖೆ ಸಮಯ ನಿಗದಿ ಮಾಡಿ ಕಡಿವಾಣ ಹಾಕಬೇಕು.

— > ನಾಸೀರ್​, ಯುವ ಮುಖಂಡ, 1ನೇ ವಾರ್ಡ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net