ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹ

ಔರಾದ್​ ತಾಲೂಕಿನ ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮನ್ನಾಎಖೇಳ್ಳಿಯಲ್ಲಿ ಬುಧವಾರ ಬೀದರ್​ ದಣ ೇತ್ರದ ಪ್ರಗತಿಪರ ಮತ್ತು ದಲಿತ ಸಂಟನೆಗಳ ಒಕ್ಕೂಟದಿಂದ ಉಪ ತಹಸೀಲ್ದಾರ್​ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ದಿಲೀಪಕುಮಾರ ವರ್ಮಾ, ರಾಜಕುಮಾರ ಸಿಂಧೆ, ವೀರಶೆಟ್ಟಿ ಬಂಬಳಗಿ, ಉಮೇಶ ಗುತ್ತೇದಾರ್​, ಲಾಲಪ್ಪ ರಾಂಪುರೆ, ಶಂಕರ ಫಿರಂಗೆ  ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬೆಳಕುಣಿಯಲ್ಲಿ ಬಾಲಕಿ ಸಾವು
  • ಮನ್ನಾಎಖೇಳ್ಳಿಯಲ್ಲಿ ಪ್ರತಿಭಟನೆ
ಚಿಟಗುಪ್ಪ: ಔರಾದ ತಾಲೂಕಿನ ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದ ಅಂಬೇಡ್ಕರ್​ ವೃತ್ತದಲ್ಲಿ ಬುಧವಾರ ಬೀದರ್​ ದಕ್ಷಿಣ ಕ್ಷೇತ್ರದ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿ ಮುಖಂಡರು, ಬೀದರ್​ ಜಿಲ್ಲೆಯ ಔರಾದ್​ ತಾಲೂಕಿನ ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ದಲಿತ ಬಾಲಕಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಕೂಡಲೇ ಸರ್ಕಾರ ಗಮನ ಹರಿಸುವ ಮೂಲಕ ಇತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಗೃಹ ಸಚಿವರಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್​ ಅನೀಲಕುಮಾರ ವ್ಯಾಸ ಅವರಿಗೆ ಸಲ್ಲಿಸಿದರು.
ಪ್ರಮುಖರಾದ ದಿಲೀಪಕುಮಾರ ವರ್ಮಾ, ರಾಜಕುಮಾರ ಸಿಂಧೆ, ವೀರಶೆಟ್ಟಿ ಬಂಬಳಗಿ, ಉಮೇಶ ಗುತ್ತೇದಾರ್​, ಲಾಲಪ್ಪ ರಾಂಪುರೆ, ಶಂಕರ ಫಿರಂಗೆ, ಅಸ್ಕರ್​, ಗೌತಮ ಬಗದಲಕರ, ಶ್ರೀಕಾಂತ ಹೊಸಮನಿ, ಅಂಬದಾಸ ಸೋನಿ, ಶಿವಕಾಂತ ಶೇಕಾಪುರ, ಮಹೇಶ ಸಾಗರ ಇತರರಿದ್ದರು. ಪೊಲೀಸ್​ರು ಸೂಕ್ತ ಬಂದೋಬಸ್ತ್​ ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net