ಉತ್ತರ ಬೆಳಗಾವಿ ಕೈಗಾರಿಕಾ ಸಂಘದ ಸಭೆಯಲ್ಲಿ ಶಿವಕುಮಾರ ಎನ್.ಜೆ., ನಾಗೇಂದ್ರ ಮೂರ್ತಿ, ಅಮಿತ ಬಾಗ್ರಿ, ಬೊನವೆಂಚರ್ ಪಿಂಟೋ, ಸಂತೋಷ ಕೆಲಗೇರಿ, ಅಜಿತ ಪಾಟೀಲ ಇತರರಿದ್ದರು.
Published on:
Copied
Follow Us
ಬೆಳಗಾವಿ: ಹೊನಗಾ, ಕಾಕತಿ ಹಾಗೂ ಕಂಗ್ರಾಳಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಕೈಗಾರಿಕಾ ಆಸ್ತಿಗಳ ಮಾಲೀಕತ್ವದ ದಾಖಲೆಗಳ ಸಮಸ್ಯೆ ಸೇರಿದಂತೆ ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸುವಂತೆ ಉತ್ತರ ಬೆಳಗಾವಿ ಕೈಗಾರಿಕಾ ಸಂಘ(ಎನ್‌ಬಿಐಎ) ಆಗ್ರಹಿಸಿದೆ.
ಗುರುವಾರ ಸಂಘದ ಅಧ್ಯಕ್ಷ ಶಿವಕುಮಾರ ಎನ್.ಜೆ. ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಈ
ಕುರಿತು ಚರ್ಚೆ ನಡೆಯಿತು. ಸಂಘ 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು, 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳನ್ನು ಪ್ರತಿನಿಧಿಸುತ್ತಿದ್ದು, 5000ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಲಭಿಸಿದೆ ಎಂದು ತಿಳಿಸಿದೆ.
ಹೊನಗಾ ಕೈಗಾರಿಕಾ ಪ್ರದೇಶದ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಹಲವೆಡೆ ಗುಂಡಿಗಳು ನಿರ್ಮಾಣವಾಗಿವೆೆ. ಚರಂಡಿ ಅವ್ಯವಸ್ಥೆ, ಪೈಪ್‌ಲೈನ್‌ಗಳಿಂದ ನೀರು ಸೋರಿಕೆ ಹಾಗೂ ಸಮರ್ಪಕ ಬೀದಿದೀಪಗಳ ಕೊರತೆ ಇದೆ.
ಕೇಬಲ್, ಪೈಪ್‌ಲೈನ್ ಹಾಗೂ ಗ್ಯಾಸ್‌ಲೈನ್ ಅಳವಡಿಕೆಗಾಗಿ ವಿವಿಧ ಏಜೆನ್ಸಿಗಳು ಪದೇ ಪದೆ ರಸ್ತೆಗಳನ್ನು ಅಗೆಯುತ್ತಿದ್ದು, ಕಾಮಗಾರಿ ಬಳಿಕ ಸಮರ್ಪಕವಾಗಿ ಸರಿಪಡಿಸುತ್ತಿಲ್ಲ. ಈ ಬಗ್ಗೆ ಕೆಐಎಡಿಬಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ದೊರೆತಿಲ್ಲ ಎಂದು ಪದಾಧಿಕಾರಿಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೂರು ದಶಕಗಳಿಂದ ಕೈಗಾರಿಕೆಗಳನ್ನು ನಡೆಸಿ ಕೊಂಡು ಬರುತ್ತಿದ್ದರೂ ಶೇ.50ಕ್ಕೂ ಹೆಚ್ಚು ಉದ್ದಿಮೆಗಳ ಬಳಿ ಮಾಲೀಕತ್ವದ ದಾಖಲೆಗಳಿಲ್ಲ. ಇದರಿಂದ ಕೈಗಾರಿಕೆಗಳ ವಿಸ್ತರಣೆ, ಹೂಡಿಕೆ, ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದರು.
ಸಂಘದ ಕಾರ್ಯದರ್ಶಿ ನಾಗೇಂದ್ರ ಮೂರ್ತಿ, ಉಪಾಧ್ಯಕ್ಷ ಬೊನವೆಂಚರ್ ಪಿಂಟೋ, ಖಜಾಂಚಿ ಸಂತೋಷ ಕೆಲಗೇರಿ, ಆಡಳಿತ ಮಂಡಳಿ ಸದಸ್ಯರಾದ ಅಜಿತ ಪಾಟೀಲ, ಅಮಿತ ಬಾಗ್ರಿ, ಧೀರಜ ಕಾಂಚನ, ಅಮೃತ ಕೋಡಾ, ಸುಧೀರ ದಾರೇಕರ, ಮೋಹನ ರಡ್ಡಿ, ದಯಾನಂದ ಧೋಂಗಡಿ ಹಾಗೂ ಹಶಮ್ ಸಯ್ಯದ್ ಇತರರಿದ್ದರು.