ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಟ್ಟು

Demand action against the culprits
Demand action against the culprits
Published on
ಹುಲಿಯೂರುದುರ್ಗ: ಹಳೆವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಿಯ ಮೂಲ ವಿಗ್ರಹದ ಮೂರ್ತಿಯ ಅಚ್ಚು ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಸ್ಥಳಿಯ ಗ್ರಾಮಸ್ಥರು ಹಾಗೂ ಭಕ್ತರು ದೇವಾಲಯದ ಮುಂಭಾಗ ಪ್ರತಿಭಟಿಸಿ ತಹಸೀಲ್ದಾರ್​ ರಶ್ಮಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಯೋಗೀಶ್​ ಗೌಡ ಮಾತನಾಡಿ, ಇತಿಹಾಸ ಪ್ರಸಿದ್ಧ ಹುಲಿಯೂರಮ್ಮ ದೇವಾಲಯದಲ್ಲಿ ರಾತ್ರೊರಾತ್ರಿ ದೇವಿ ವಿಗ್ರಹದ ಅಚ್ಚು ಸಂಗ್ರಹಿಸಲು ಬಂದವರ ವಿರುದ್ಧ ಇದುವರೆಗೂ ಕಾನೂನು ಕ್ರಮ ಜರುಗಿಸಿಲ್ಲ. ದೇವಾಲಯದ ಇಒ ಮಂಜೇಶ್​ ಅವರನ್ನು ಅಮಾನತ್ತುಗೋಳಿಸಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ್​ ರಶ್ಮಿ ಮಾತನಾಡಿ, ತಪ್ಪಿತಸ್ಥರ ವಿರುದ್ಧ ದೇವಾಲಯದ ಆಡಳಿತ ಅಧಿಕಾರಿ ಹಾಗೂ ತುಮಕೂರು ಉಪ ವಿಭಾಗಾಧಿಕಾರಿಗಳ ನಿರ್ದೇಶನದ ಮೆರೆಗೆ ಸೋಮವಾರ ಪೊಲೀಸರಿಗೆ ದೂರು ನೀಡಲಾಗಿದೆ. ದೇವಾಲಯಕ್ಕೆ ಯಾವುದೆ ಅನುಮತಿ ಇಲ್ಲದೆ ಅರ್ಚಕರ ಸಮ್ಮುಖದಲ್ಲಿ ಗರ್ಭಗುಡಿ ಪ್ರವೇಶ ಮಾಡಿ ಕೆಲವರು ಅಚ್ಚು ಸಂಗ್ರಹ ಮಾಡಲು ಮುಂದಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ತಪ್ಪು ಎಸಗಿರುವ ಅರ್ಚಕರನ್ನು ಅಮಾನತ್ತು ಗೋಳಿಸಲಾಗಿದೆ. ಉಳಿದವರ ವಿರುದ್ಧ ಸಿಸಿ ಕ್ಯಾಮಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಮೃತೂರು ಸಿಪಿಐ ನವೀನ್​ಗೌಡ, ಹುಲಿಯೂರುದುರ್ಗ ಪಿಎಸ್​ಐ ಪ್ರಶಾಂತ್​, ಉಪ ತಹಸೀಲ್ದಾರ್​ ಜಗದೀಶ್​, ಕಂದಾಯ ನಿರೀಕ್ಷಕ ಪುರುಷೋತ್ತಮ್​, ಸ್ಥಳಿಯರಾದ ಜಗದೀಶ್​, ಗಿರೀಶ್​, ಯೋಗೇಶ್​ ಗೌಡ, ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net