

ಕಲಬುರಗಿ: ಏಪ್ರಿಲ್/ಮೇ 2026ರಲ್ಲಿ ನಡೆಯುವ ಡಿ.ಇಎಲ್.ಇಡಿ. ಪ್ರಥಮ ಹಾಗೂ ದ್ವಿತೀಯ ವರ್ಷದ ಪೂರಕ ಪರೀಕ್ಷೆಗಳು ವೇಳಾಪಟ್ಟಿಯಂತೆ ಇದೇ ಏಪ್ರಿಲ್ 27 ರಿಂದ ಮೇ 4ರವರೆಗೆ ಕಲಬುರಗಿ ನಗರದ ದರ್ಗಾ ರಸ್ತೆಯ ಪ್ರಜ್ಞಾ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‍ದಲ್ಲಿ ಜರುಗಲಿದೆ ಎಂದು ಕಲಬುರಗಿ ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಉಪನಿರ್ದೇಶಕರು (ಅ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.