ನೆನೆಗುದಿಗೆ ಬಿದ್ದಿದ್ದ ಡಾಂಬರೀಕರಣಕ್ಕೆ ವೇಗ / NELAMANGAL

ನೆಲಮಂಗಲ ತಾಲೂಕು ರೈಲ್ವೇಗೊಲ್ಲಹಳ್ಳಿ ಗೇಟ್​ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮತ್ತಿತರರು ಇದ್ದರು.
ನೆಲಮಂಗಲ ತಾಲೂಕು ರೈಲ್ವೇಗೊಲ್ಲಹಳ್ಳಿ ಗೇಟ್​ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮತ್ತಿತರರು ಇದ್ದರು.
Published on
ನೆಲಮಂಗಲ : ಗುತ್ತಿಗೆದಾರರು ಹಾಗೂ ಅಧಿಕಾರಿಗಳ ರ್ನಿಲಕ್ಷ$್ಯದಿಂದ ದಶಕಗಳಿಂದಲೂ ನೆನಗುದಿಗೆ ಬಿದ್ದಿದ್ದ ರೈಲು ಮೇಲ್ಸೇತುವೆ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು.
ನೆಲಮಂಗಲದಿಂದ ಚಿಕ್ಕಬಳ್ಳಾಪುರ ಮಾರ್ಗದ ರೈಲ್ವೆಗೊಲ್ಲಹಳ್ಳಿ ಬಳಿ ರೈಲು ಮಾರ್ಗದ ಮೇಲ್ಸೇತುವೆ ಹಾಗೂ ಕೆಳಭಾಗದಲ್ಲಿ ರಸ್ತೆ ನಿರ್ಮಿಸುವ ಉದ್ದೇಶದಿಂದ 44 ಕೋಟಿ ರೂಪಾಯಿಗೆ ಟೆಂಡರ್​ ಕರೆಯಾಗಿತ್ತು. ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. 2 ಕಿ.ಮೀ ರಸ್ತೆ ದಾಟಲು ಅಧಿಕ ಸಮಯ ಬೇಕಾಗಿತ್ತು. ಆದರೆ ಈ ಭಾಗದ ಮುಖಂಡರು ಸಾರ್ವಜನಿಕರು ಶಾಸಕರ ಬಳಿ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಿದ್ದರು. ಹೀಗಾಗಿ ಪಿಬ್ಲ್ಯೂಡಿ ಇಲಾಖೆಯ ಇಂಜಿನಿಯರ್​ಗಳು ಸ್ಥಳ ಪರಿಶೀಲಿಸಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದು, ಡಾಂಬರೀಕರಣ ಸಿದ್ಧತೆ ಮಾಡಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ ಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು.
ಇಚ್ಛಾಶಕ್ತಿ ಕೊರತೆ: 2018ರವರೆಗೆ ಕಾಮಗಾರಿ ವೇಗವಾಗಿ ನಡೆದಿದ್ದು, ಸರ್ಕಾರ ಬದಲಾಗಿ ಕಾಮಗಾರಿ ನಿಂತುಹೋಯಿತು. ಕಾಮಗಾರಿಗೆ ಬೇಕಿದ್ದ ಅಗತ್ಯ ಭೂಸ್ವಾಧಿನ ಸಮಸ್ಯೆ, ಕಾಮಗಾರಿ ದರಪಟ್ಟಿ ಬೆಲೆ ಏರಿಕೆ ಒಂದೆಡೆಯಾದರೆ, ಈ ಹಿಂದಿನ ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಶಾಸಕನಾದ ಕೂಡಲೇ ಸಂಬಂಧಪಟ್ಟ ಸಚಿವರ ಬಳಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಪರ್ಯಾಯವಾಗಿ ಕೆಲ ದೂರ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ರಸ್ತೆಯಲ್ಲಿ ಹೆಚ್ಚಾಗಿದ್ದ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ರಂಗೋಲಿ ಸ್ಪರ್ಧೆಗೆ ಆಗಮಿಸಿದಾಗ ಈ ಭಾಗದ ಮಹಿಳೆಯರು, ಮುಖಂಡರು ರಸ್ತೆ ಸಮಸ್ಯೆ ಹೇಳಿಕೊಂಡರು. ಹೀಗಾಗಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು.
ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ಸೋಮಶೇಖರ್​, ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡ ಬೇಗೂರು ಮುನಿಯಪ್ಪ, ಸಿಎಂ.ಗೌಡ, ವಕೀಲ ಮುರುಳಿ, ಜಗದಾಂಬಪುಟ್ಟಸ್ವಾಮಿ, ಲಿಂಗೇಗೌಡ, ಕೆ.ವಸಂತ್​ ಇತರರು ಇದ್ದರು.
ನಾಲಿಗೆ ಹರಿಬಿಡಬೇಡಿ : ಸ್ವಂತ ಖರ್ಚಿನಲ್ಲಿ ರಂಗೋಲಿ ಸ್ಪರ್ಧೆ ಮಾಡುತ್ತಿದ್ದರೆ ತಮ್ಮದೇ ಸರ್ಕಾರ ಇದ್ದಾಗ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದವರು ಹಾಗೂ ಶಾಸಕರ ಕೆಲ ಹಿಂಬಾಲಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದವರು ಕೆಟ್ಟರಿತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿಗೂ ನಾನು ಶಾಸಕನಾಗಿ ಬಂದ ಕೆಲವೇ ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ವಿಮರ್ಶೆ ಮಾಡಿ ಮಾತನಾಡಬೇಕೆ ಹೊರತು ಬಾಯಿಗೆ ಬಂದಂತೆ ನಾಲಿಗೆ ಹರಿಬಿಡಬೇಡಿ. ಟೀಕೆ ಮಾಡುವುದಕ್ಕೂ ಅರ್ಥ ಇರಬೇಕು ಎಂದು ವಿರೋದ ಪಕ್ಷದವರಿಗೆ ಶಾಸಕ ಎನ್​.ಶ್ರೀನಿವಾಸ್​ ಕಿವಿಮಾತು ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ಟಿ.ಬೇಗೂರು ಗ್ರಾಪಂ ವ್ಯಾಪ್ತಿಯ ಮಾರೋಹಳ್ಳಿ ಎಸ್​.ಟಿ.ಕಾಲನಿಯಲ್ಲಿ ಸಿಸಿ ರಸ್ತೆ ಚರಂಡಿ ನಿಮಾರ್ಣ, ಬೈರನಹಳ್ಳಿಯಲ್ಲಿ ಗ್ರಂಥಾಲಯ ಉದ್ಘಾಟನೆ, ಸ್ತ್ರೀಶಕ್ತಿ ಭವನ ಮತ್ತು ಪಡಿತರ ವಿತರಣಾ ಉಪಕೇಂದ್ರ ನಿಮಾರ್ಣ ಭೂಮಿಪೂಜೆ, ಕಂಬಯ್ಯ ಪಾಳ್ಯದಲ್ಲಿ ಶುದ್ಧಕುಡಿಯುವ ನೀರಿನ ಘಟಕಕ್ಕೆ ಶಾಸಕ ಎನ್​.ಶ್ರೀನಿವಾಸ್​ ಚಾಲನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net