ನಾಯಿಗಳ ದಾಳಿಗೆ ಸಿಲುಕಿ ಶೌಚಗೃಹ ಸೇರಿದ್ದ ಜಿಂಕೆ ರಕ್ಷಣೆ

Deer rescued after taking refuge in a restroom while being chased by dogs.
Deer rescued after taking refuge in a restroom while being chased by dogs.
Published on
ಚಿಂತಾಮಣಿ: ಎಂ.ಜಿ.ರಸ್ತೆಯ ತಪತೇಶ್ವರ ಕಾಲನಿಯಲ್ಲಿ ಭಾನುವಾರ ತಡರಾತ್ರಿ ನಾಯಿಗಳ ದಾಳಿಗೆ ಸಿಲುಕಿ ಮನೆಯ ಶೌಚಗೃಹ ಸೇರಿದ್ದ ಜಿಂಕೆಯನ್ನು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಸಿದ್ದಾರೆ.
ಜಿಂಕೆ ತಪ್ಪಿಸಿಕೊಂಡು ಕಾಲನಿಯ ನಿವಾಸಿಯೊಬ್ಬರ ಮನೆಯ ಶೌಚಗೃಹಕ್ಕೆ ಸೇರಿಕೊಂಡಿತ್ತು. ಅದರ ಕಿರುಚಾಟ ಗಮನಿಸಿದ ವೆಂಕಟರಮಣ ಕುಟುಂಬಸ್ಥರು ನಗರ ಠಾಣೆ ಪೊಲೀಸರು, ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸೋಮವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದ ವಲಯ ಅರಣ್ಯ ಸಿಬ್ಬಂದಿ ಗಾಯಗೊಂಡು ಶೌಚಗೃಹದಲ್ಲಿದ್ದ ಜಿಂಕೆಯನ್ನು ವಶಕ್ಕೆ ಪಡೆದು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕೈವಾರ ತಪೋವನಕ್ಕೆ ಕರೆದೊಯ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net