ಕೋಡಿಹಳ್ಳಿಯಲ್ಲಿ ದೀಪೋತ್ಸವ ಸಂಪನ್ನ Deepotsav

ಕೋಡಿಹಳ್ಳಿಯಲ್ಲಿ ದೀಪೋತ್ಸವ ಸಂಪನ್ನ Deepotsav
ಕೋಡಿಹಳ್ಳಿಯಲ್ಲಿ ದೀಪೋತ್ಸವ ಸಂಪನ್ನ Deepotsav
Published on
ಲಕ್ಕೂರು: ಮಾಲೂರು ತಾಲೂಕು ಲಕ್ಕೂರು ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಶ್ರೀ ದ್ರೌಪದಾಂಬ ದೇವಿಯ ಕರಗ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದಿಪೋತ್ಸವ ಅದ್ದೂರಿಯಾಗಿ ನೆರವೇರಿತು.Deepotsav
ಮಹಿಳೆಯರು ದೇವಾಲಯಕ್ಕೆ ದೀಪಗಳನ್ನು ತಂದು ದೇವಿಗೆ ಸಮರ್ಪಿಸಿದರು. ಕರಗದ ಪೂಜಾರಿ ವಿ.ಸುರೇಶ್​ ವೀರಕುಮಾರರೊಂದಿಗೆ ತೆರಳಿ ಗ್ರಾಮಸ್ಥರಿಂದ ವಿಶೇಷ ಪೂಜೆ ಸ್ವೀಕರಿಸಿದರು.
ಸುಮಾರು 200 ದೀಪಗಳನ್ನು ಹಚ್ಚಿಡಲಾಗಿದ್ದು, ಉತ್ತಮವಾದ ದೀಪಗಳಿಗೆ ವಿಶೇಷ ಬಹುಮಾನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೀಪಗಳಿಗೆ ಸಮಧಾನಕರ ಬಹುಮಾನ ವಿತರಿಸಲಾಯಿತು.
ಸಂಜೀವಿನಿ ಚಾರಿಟಬಲ್​ ಟ್ರಸ್ಟ್​ ಸಂಸ್ಥಾಪಕ ಹೂಡಿ ವಿಜಯ್​ಕುಮಾರ್​ ಮಾತನಾಡಿ, ಕೋಡಿಹಳ್ಳಿಯಲ್ಲಿ ನೂರಾರು ವರ್ಷಗಳಿಂದ ಕರಗ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 5 ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ತಿಳಿಸಿದರು.
ದೇವಾಲಯದ ಸದಸ್ಯರಾದ ಶ್ರೀನಿವಾಸ್​, ರಾಜಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ವೀರಕುಮಾರರು ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net