ಶಿಕ್ಷಕರಿಗೆ ಸಮರ್ಪಣೆ ಮನೋಭಾವ ಮುಖ್ಯ

ವಿಜಯಪುರ ನಗರದ ಆರ್‌ಕೆಎಂ ಪಿಯು ಸೈನ್ಸ್ ಕಾಮರ್ಸ್ ಕಾಲೇಜು ಮತ್ತು ದ್ರೋಣ ಅಕಾಡೆಮಿ ಜತೆಗೆ ಮಾಡಿಕೊಂಡ ಎನ್‌ಡಿಎ ತರಬೇತಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಶಂಭುಲಿಂಗಯ್ಯ ಕರ್ಪೂರಮಠ, ಕಲ್ಮೇಶ ಆಸಂಗಿ ಇತರರಿದ್ದಾರೆ.
ವಿಜಯಪುರ ನಗರದ ಆರ್‌ಕೆಎಂ ಪಿಯು ಸೈನ್ಸ್ ಕಾಮರ್ಸ್ ಕಾಲೇಜು ಮತ್ತು ದ್ರೋಣ ಅಕಾಡೆಮಿ ಜತೆಗೆ ಮಾಡಿಕೊಂಡ ಎನ್‌ಡಿಎ ತರಬೇತಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಶಂಭುಲಿಂಗಯ್ಯ ಕರ್ಪೂರಮಠ, ಕಲ್ಮೇಶ ಆಸಂಗಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ವಿವಿ ಕುಲಸಚಿವ ಬಿ.ಎಲ್. ಲಕ್ಕಣವರ ಅಭಿಮತ
  • ವಿದ್ಯಾರ್ಥಿ ಒಕ್ಕೂಟ ಆಯೋಜನೆ
ವಿಜಯಪುರ: ವಿದ್ಯಾರ್ಥಿಗಳಿಗೆ ಸಶಸ್ತ್ರ ಪಡೆಗಳಲ್ಲಿ ವೃತ್ತಿ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಆರ್‌ಕೆಎಂ ಪಿಯು ಸೈನ್ಸ್ ಕಾಮರ್ಸ್ ಕಾಲೇಜು ಮತ್ತು ದ್ರೋಣ ಅಕಾಡೆಮಿಯೊಂದಿಗೆ ಒಪ್ಪಂದ ಪತ್ರ (ಎಂಒಯು) ಕ್ಕೆ ಸಹಿ ಹಾಕಿದ್ದು, ಆ ಮೂಲಕ ವಿಶೇಷ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.
ನಗರ ಹೊರ ವಲಯದ ಆರ್‌ಕೆಎಂ ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಒಪ್ಪಂದ ಪ್ರಕ್ರಿಯೆಯಲ್ಲಿ ಆರ್‌ಕೆಎಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಹಾಗೂ ದ್ರೋಣ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಕಲ್ಮೇಶ ಆಸಂಗಿ ಸಹಿ ಹಾಕುವ ಜತೆಗೆ ಭವಿಷ್ಯದ ಸಶಸ್ತ್ರ ಪಡೆ ಅಧಿಕಾರಿಗಳನ್ನು ರೂಪಿಸುವ ದಿಟ್ಟ ಸಹಕಾರಕ್ಕೆ ಚಾಲನೆ ನೀಡಿದರು.
ಈ ಯೋಜನೆಯಡಿ ಸಶಸ್ತ್ರ ಪಡೆಗಳಲ್ಲಿ ಸೇರುವ ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಹಾಗೂ ಸಮಗ್ರ ಎನ್‌ಡಿಎಗೆ ತರಬೇತಿ ನೀಡಲಾಗುತ್ತದೆ. ಅಲ್ಲದೇ, ಪಿಯು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಜತೆಗೆ ಎನ್‌ಡಿಎಗೆ ಅಗತ್ಯ ತರಬೇತಿ ಪಡೆಯಲಿದ್ದಾರೆ. ಕಾಲೇಜಿನ ಆವರಣದಲ್ಲಿಯೇ ತರಬೇತಿ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲಕರ, ಶಿಸ್ತಿನ ಹಾಗೂ ಕೇಂದ್ರೀಕೃತ ಅಧ್ಯಯನ ವಾತಾವರಣ ಒದಗಿಸಲಿದೆ.
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಮಾತನಾಡಿ, ಈ ಸಹಭಾಗಿತ್ವವು ವಿದ್ಯಾರ್ಥಿಗಳಲ್ಲಿ ದೇಶ ಸೇವೆ ಮನೋಭಾವ, ಶಿಸ್ತಿನ ಮೌಲ್ಯಗಳು ಹಾಗೂ ಉನ್ನತ ಗುರಿಗಳನ್ನು ಬೆಳೆಸುವ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ದ್ರೋಣ ಅಕಾಡೆಮಿಯೊಂದಿಗೆ ಹೊಂದಿದ ಒಪ್ಪಂದವು ದೇಶ ಸೇವೆಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಬಲವಾದ ನೆಲೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net