ಶಿಕ್ಷಣಕ್ಕೆ ಸಮಯ ಮುಡಿಪಾಗಿಡಿ Awareness

ಹುಳಿಯಾರು Awareness ವಾಸವಿ ಆಂಗ್ಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ$್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ವಲಯದ ಮೇಲ್ವಿಚಾರಕಿ ಭಾಗ್ಯಮ್ಮ, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ, ಸೇವಾ ಪ್ರತಿನಿಧಿಗಳು ವಿದ್ಯಾರ್ಥಿಗಳು ಇದ್ದರು.
ಹುಳಿಯಾರು Awareness ವಾಸವಿ ಆಂಗ್ಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ$್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ವಲಯದ ಮೇಲ್ವಿಚಾರಕಿ ಭಾಗ್ಯಮ್ಮ, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ, ಸೇವಾ ಪ್ರತಿನಿಧಿಗಳು ವಿದ್ಯಾರ್ಥಿಗಳು ಇದ್ದರು.
Published on

ಹುಳಿಯಾರು:

ವಿದ್ಯಾರ್ಥಿಗಳು ಮನಸ್ಸಿನ ಚಂಚಲತೆಗೆ ಆಸ್ಪದ ನೀಡದೆ ಯೋಗ,

Awareness

ಧ್ಯಾನ, ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸದೃಢ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಂದಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಮಾಲತೇಶ್​ ಹೇಳಿದರು.

ಹುಳಿಯಾರು ವಾಸವಿ ಆಂಗ್ಲ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ$್ಯ ಸಂಕಲ್ಪ ಜಾಗೃತಿಯಲ್ಲಿ ಮಾತನಾಡಿ, 10ರಿಂದ 20 ವರ್ಷದ ಹದಿಹರೆಯದ ವಯಸ್ಸು ಸೂಕ್ಷ$್ಮವಾದದ್ದು, ಈ ಹಂತದಲ್ಲಿ ದೇಹದಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆಗಳಿಂದ ಮನಸ್ಸು ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ, ವಿದ್ಯಾರ್ಥಿ ಜೀವನ ಅರಿತು, ಸಮಯ ವ್ಯರ್ಥ ಮಾಡದೆ ಶಿಕ್ಷಣಕ್ಕೆ ಮುಡಿಪಾಗಿಡಬೇಕು ಎಂದು ಕಿವಿಮಾತು ಹೇಳಿದರು.
ಮಾನವನ ಸರಾಸರಿ ಆಯುಷ್ಯ 60ರಿಂದ 65 ವರ್ಷ. ಇದರಲ್ಲಿ ಮೂರನೇ ಒಂದು ಭಾಗದಷ್ಟು ನಿದ್ರೆಗೆ, ಸ್ವಂತ ಹಾಗೂ ನಿತ್ಯಕರ್ಮಗಳಿಗೆ, ಶಾಲೆ, ಉದ್ಯೋಗ, ವೃತ್ತಿ ಜೀವನಕ್ಕೆ ಕಳೆದು ಹೋಗುತ್ತದೆ. ಹೀಗಾಗಿ ನಮಗೆ ಸಿಗುವ ಅತ್ಯಲ್ಪ ಸಮಯ ಸದುಪಯೋಗಪಡಿಸಿಕೊಂಡು, ಸಂಸ್ಕಾರ ಹಾಗೂ ಸಂಸತಿ ಬೆಳೆಸಿಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net