ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ವಿ. ಕುಲಕರ್ಣಿ, ಸಾಹಿತಿ ಭೀಮಪ್ಪ ಬೋನಾಳ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಸದಾನಂದ ಪೆರ್ಲ ಸೇರಿದಂತೆ ಅನೇಕರು ಮಾತನಾಡಿ, ಡಾ.ರಾಜ್ ಅವರ ಚಿತ್ರಗಳು ಕೇವಲ ಸಿನಿಮಾಗಳಾಗದೆ ಅವು ಬದುಕಿನ ದಾರಿದೀಪಗಳಾಗಿವೆ. ಇಂತಹ ಮೇರು ನಟನ ಪುತ್ಥಳಿ ನಗರದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಸ್ಥಾಪಿಸಲು ಈ ಹಿಂದೆ ಪಾಲಿಕೆಯಿಂದ ನಿರ್ಣಯ ಕೈಗೊಂಡಿದ್ದು, ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಪುತ್ಥಳಿ ಸ್ಥಾಪಿಸುವ ಮೂಲಕ ಶ್ರೇಷ್ಠ ಕಲಾವಿದನಿಗೆ ಗೌರವ ಸಲ್ಲಿಸಬೇಕು, ನಗರದಲ್ಲಿ ಒಂದು ರಸ್ತೆಗೆ ಅವರ ಹೆಸರಿಡಬೇಕು, ಡಾ.ರಾಜಕುಮಾರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿಕೊಂಡರು.