ವಂದೇ ಭಾರತಂ ಯೋಜನೆಗೆ ಡಿಸಿಎಂ ಡಾ.ಜಿ.ಪರಮೇಶ್ವರ್​​​ ಶ್ಲಾಘನೆ- DCM Dr. G. Parameshwar

ಡಿಸಿಎಂ ಡಾ.ಜಿ. ಪರಮೇಶ್ವರ್​​
ಡಿಸಿಎಂ ಡಾ.ಜಿ. ಪರಮೇಶ್ವರ್​​
Published on

ಬೆಂಗಳೂರು: ಅದಾನಿ ಗ್ರೂಪ್‌ ವಿನೂತನ ಯೋಜನೆಯಾದ ವಂದೇ ಭಾರತಂ ಸಂಪರ್ಕ ಅಭಿಯಾನದ ಭಾಗವಾಗಿ ಅದಾನಿ ಗ್ರೂಪ್‌ನ ಪ್ರತಿನಿಧಿಗಳ ತಂಡ, ಡಿಸಿಎಂ ಡಾ.ಜಿ. ಪರಮೇಶ್ವರ್​​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ಈ ವೇಳೆ ನಾವೀನ್ಯತೆ, ಉದ್ಯಮಶೀಲತೆ, ತಳಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವಂದೇ ಭಾರತಂ ಅಭಿಯಾನದ ವಿವರಗಳನ್ನೊಳಗೊಂಡ ಕಾರ್ಯಕ್ರಮದ ಕಿಟ್, ಸ್ಮರಣಿಕೆ ಮತ್ತು ಪತ್ರವನ್ನು ಡಿಸಿಎಂಗೆ ಹಸ್ತಾಂತರಿಸಲಾಯಿತು.

ಹೊಸ ಆಲೋಚನೆಗಳಿಗೆ ಸೂಕ್ತ ಮಾರ್ಗದರ್ಶನ, ಉದ್ಯಮ ಕ್ಷೇತ್ರದ ಸಂಪರ್ಕ ಮತ್ತು ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಕಲ್ಪಿಸುವ ಮೂಲಕ ರಾಜ್ಯದ ಯುವಜನರ ಉದ್ಯಮಶೀಲತೆಯ ಸಾಮರ್ಥ್ಯಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಅಭಿಯಾನಕ್ಕೆ ಕರ್ನಾಟಕದಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 1,400ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕುರಿತು ಜಿ. ಪರಮೇಶ್ವರ ಅವರಿಗೆ ಮಾಹಿತಿ ನೀಡಲಾಯಿತು. ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಡಿಸಿಎಂ, ಕರ್ನಾಟಕದ ವಿಶಿಷ್ಟ ಹೊಸ ಆವಿಷ್ಕಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ ಎಂದರು.
2026ರ ಜೂ.25ರಂದು ವಂದೇ ಭಾರತಂ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನದಡಿ ಉದಯೋನ್ಮುಖ ಆವಿಷ್ಕಾರಕರಿಗೆ ತಮ್ಮ ಆಲೋಚನೆಗಳನ್ನು ನವೋದ್ಯಮಗಳಾಗಿ ಪರಿವರ್ತಿಸಲು ರಾಷ್ಟ್ರೀಯ ವೇದಿಕೆ ಒದಗಿಸುವ ಮೂಲಕ ದೇಶಾದ್ಯಂತ ಇರುವ ಉದ್ಯಮಶೀಲತೆ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಯಾವುದೇ ವಯಸ್ಸು ಅಥವಾ ಹಿನ್ನೆಲೆಯ ವ್ಯಕ್ತಿಗಳೂ ಇದರಲ್ಲಿ ಭಾಗವಹಿಸಬಹುದಾಗಿದ್ದು, ಕೇವಲ ಒಂದು ಹೊಸ ಆಲೋಚನೆ ಮತ್ತು ಅದನ್ನು ಸಾಕಾರಗೊಳಿಸುವ ದೃಢಸಂಕಲ್ಪ ಮಾತ್ರ ಇದ್ದರೆ ಸಾಕು.
ಆಯ್ಕೆಯಾಗುವ 75 ಅಂತಿಮ ಸ್ಪರ್ಧಿಗಳಿಗೆ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ, ಹೂಡಿಕೆದಾರರ ಸಂಪರ್ಕ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಅಹಮದಾಬಾದ್​​​​​ನಲ್ಲಿ ನಡೆಯಲಿರುವ ಗ್ರ್ಯಾಂಡ್​​​ ಫಿನಾಲೆಯಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net