ಕೆಜಿಎಫ್​ ನಗರಸಭೆ ಸಿಬ್ಬಂದಿ, ಅಧಿಕಾರಿಗಳಿಗೆ ಡಿಸಿ ಕ್ಲಾಸ್

DC class for KGF Municipal Council staff and officers
DC class for KGF Municipal Council staff and officers
Published on
ಕೆಜಿಎಫ್: ಸರ್ಕಾರಿ ನೌಕರರು, ಸಿಬ್ಬಂದಿಗೆ ಸರ್ಕಾರ ಸವಲತ್ತುಗಳನ್ನು ನೀಡುತ್ತಿದ್ದು, ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ. ಸರ್ಕಾರದಿಂದ ಪಡೆದುಕೊಳ್ಳುವ ಸಂಬಳಕ್ಕೆ ಉತ್ತರದಾಯಿತ್ವ ಇರಬೇಕಾದುದು ನಿಮ್ಮ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.
ನಗರಸಭೆ ಆಡಳಿತಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಶಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಪಕ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಎಲ್ಲ ನಗರಸಭೆ ಕಚೇರಿಗಳಲ್ಲಿ ಕಂದಾಯ ನಿರೀಕ್ಷಕರು, ಅಧಿಕಾರಿಗಳಿಗೆ ಕಂಪ್ಯೂಟರ್​ ನೀಡಲಾಗಿದ್ದು, ಸಿಬ್ಬಂದಿ ಕಂಪ್ಯೂಟರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಸಿಬ್ಬಂದಿ ಒಬ್ಬ ಡೇಟಾ ಎಂಟ್ರಿ ಆಪರೇಟರ್​ ನೆಚ್ಚಿಕೊಂಡು ಕುಳಿತಿದ್ದಾರೆ. ಯಾರೊಬ್ಬರೂ ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ಆಗಿಂದಾಗ್ಗೆ ಸುತ್ತೋಲೆ ಕಳುಹಿಸುತ್ತದೆ. ಇವರಿಗೆ ನಿಯತ್ತು ಬೇಡವೇ ಎಂದು ಪ್ರಶ್ನಿಸಿದರು.
ನಗರಸಭೆ ಕಚೇರಿಗೆ ಆಗಮಿಸುತ್ತಿದ್ದಂತೆ ಪೌರಾಯುಕ್ತ ಶ್ರೀಧರ್​ ವಿರುದ್ಧ ಗರಂ ಆಗಿ ನಗರಸಭೆ ಆವರಣದಲ್ಲಿ ವಾಹನ ನಿಲ್ಲಿಸಲು ರ್ನಿದಿಷ್ಟ ಜಾಗ ಗುರುತಿಸಲು ಹೇಳಿದರು. ಖಾತೆ ಶಾಖೆಗೆ ತೆರಳಿ ಎಷ್ಟು ಜನ ಆರ್​ಒಗಳು, ಆರ್​ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ?, ಲಾಗಿನ್​ನಲ್ಲಿ ಎಷ್ಟು ಕಡತಗಳು ವಿಲೇವಾರಿ ಮಾಡಲಾಗಿದೆ?, ಎಷ್ಟು ಬಾಕಿ ಇದೆ? ಲೆಕ್ಕ ನೀಡಿ ಎನ್ನುತ್ತಿದ್ದಂತೆ ಕಂದಾಯ ಅಧಿಕಾರಿ ಜಯರಾಮ್​ ತಡಬಡಾಯಿಸಿದ ಪ್ರಸಂಗ ನಡೆಯಿತು. ನಂತರ ಕಂಪ್ಯೂಟರ್​ನಲ್ಲಿದೆ ಎಂದು ಹೇಳುತ್ತಿದ್ದಂತೆ ಜಿಲ್ಲಾಧಿಕಾರಿಗಳು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಕೆಲಸ ಶೀಘ್ರ ಮಾಡಿಕೊಡಿ. ಇಲ್ಲವೇ ಹಿಂಬರಹ ನೀಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಬಳಿಕ ರೆಕಾರ್ಡ್​ ರೂಂನ ಒಳಗೆ ಸಾರ್ವಜನಿಕರು ಪ್ರವೇಶಿಸಲು ಇರುವ ಕೊಠಡಿ ಬಾಗಿಲು ಏಕೆ ಮುಚ್ಚಲಾಗಿದೆ? ಕೂಡಲೇ ತೆರೆಯಿರಿ ಎಂದು ಸೂಚಿಸಿದರು.
ತಕ್ಷಣದಿಂದಲೇ ಕಂಪ್ಯೂಟರ್​ ಆಪರೇಟರ್​ನನ್ನು ಆರ್​ಐ ಮತ್ತು ಆರ್​ಒ ಕೊಠಡಿಗೆ ಬದಲಾವಣೆ ಮಾಡಿ, ಖಾತೆ ಪಡೆಯಲು ಸಾರ್ವಜನಿಕರು ಕಚೇರಿಗೆ ಅಲೆದಾಡುವ ಅವಶ್ಯಯಿಲ್ಲ. ಸಿಟಿಜನ್​ ಪೋರ್ಟಲ್​ ಮೂಲಕ ಆನ್​ಲೈನ್​ನಲ್ಲಿ ತಮ್ಮ ಸ್ವತ್ತುಗಳಿಗೆ ಅರ್ಜಿ ಸಲ್ಲಿಸಿದರೆ ರ್ನಿದಿಷ್ಟ ಸಮಯದೊಳಗೆ ಖಾತೆ ಮಾಡಿಕೊಡಲಾಗುವುದು. ಒಂದು ವೇಳೆ ತಕಾರರು ಇದ್ದರೆ ಮೊಬೈಲ್​ ಮೂಲಕ ಮಾಹಿತಿ ಬರುತ್ತದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಾರ್ವಜನಿಕರು ಪಯೋಗಪಡಿಸಿಕೊಳ್ಳಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೆ ಪಯಾರ್ಯ ವ್ಯವಸ್ಥೆ ಮಾಡಿಕೊಡಿ. ಜತೆಗೆ ುಡ್​ಕೋರ್ಟ್​ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಆರೋಗ್ಯ ನಿರೀಕ್ಷಕರಿಗೆ ತಿಳಿಸಿದರು. ನಗರಸಭೆ ಮುಂಭಾಗದ ಉದ್ಯಾನವನಕ್ಕೆ ಅನುದಾನ ನೀಡಲಾಗಿದ್ದರೂ, ಸರ್ಮಪಕ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು, ಪಾರ್ಕ್​ ಶುಚಿಗೊಳಿಸಲು ಕ್ರಮಕೈಗೊಳ್ಳಲು ಆದೇಶಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net