ಏ.10, 11ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಪೋಹಂಸ’ ಮತ್ತು ‘ಸ್ವಪ್ನ ವೃಂದಾವನ’ ನೃತ್ಯ ರೂಪಕ

ಶ್ರೀರಾಘವೇಂದ್ರಸ್ವಾಮಿ ಮತ್ತು ಶ್ರೀ ವಾದಿರಾಜ ಸ್ವಾಮಿಗಳ ಕುರಿತು ನೃತ್ಯ ರೂಪಕ
ಶ್ರೀರಾಘವೇಂದ್ರಸ್ವಾಮಿ ಮತ್ತು ಶ್ರೀ ವಾದಿರಾಜ ಸ್ವಾಮಿಗಳ ಕುರಿತು ನೃತ್ಯ ರೂಪಕ
Published on

ಪ್ರಮುಖ ಮುಖ್ಯಾಂಶಗಳು

  • ‘ತಪೋಹಂಸ’ ಮತ್ತು ‘ಸ್ವಪ್ನ ವೃಂದಾವನ’ ನೃತ್ಯ ರೂಪಕ
  • ಶ್ರೀರಾಘವೇಂದ್ರಸ್ವಾಮಿ ಮತ್ತು ಶ್ರೀ ವಾದಿರಾಜ ಸ್ವಾಮಿಗಳ ಚರಿತ್ರೆ ಅನಾವರಣ
  • ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ, ಶನಿವಾರ ಪ್ರದರ್ಶನ

ಬೆಂಗಳೂರು:ಭಕ್ತಿ,ಕಲೆ ಮತ್ತುಸಮಾಜಮುಖಿ ಚಿಂತನೆಯೊಂದಿಗೆಅಪರೂಪದ ಸಾಂಸ್ಕೃತಿಕ ಅನುಭವನೀಡುವ ಶ್ರೀರಾಘವೇಂದ್ರ ಸ್ವಾಮಿಗಳಮತ್ತು ಶ್ರೀ ವಾದಿರಾಜ ಸ್ವಾಮಿಗಳಕುರಿತು ನೃತ್ಯ ರೂಪಕ ಪ್ರದರ್ಶನಶುಕ್ರವಾರ ಮತ್ತು ಶನಿವಾರಹಮ್ಮಿಕೊಳ್ಳಲಾಗಿದೆ.

ಜೆ.ಸಿ.ರಸ್ತೆಯಲ್ಲಿರುವರವೀಂದ್ರ ಕಲಾಕ್ಷೇತ್ರದಲ್ಲಿಸಂಜೆ 7 ಗಂಟೆಗೆಆರಂಭವಾಗಲಿರುವ ಕಾರ್ಯಕ್ರಮದಲ್ಲಿ,ಪ್ರಭಾತ್ ಆರ್ಟ್ಸ್ಇಂಟರ್‌ನ್ಯಾಷನಲ್ ಕಲಾವಿದರುಪ್ರದರ್ಶನ ನೀಡಲಿದ್ದಾರೆ.ಎರಡು ದಿವಸನಡೆಯುವ ವೈಭವಶಾಲಿ ನೃತ್ಯ ರೂಪಕಗಳು‘ತಪೋಹಂಸ’ ಮತ್ತು ‘ಸ್ವಪ್ನವೃಂದಾವನ’ ಎಂಬ ಹೆಸರಿನಲ್ಲಿಪ್ರದರ್ಶನ ನಡೆಯಲಿದೆ.

ತಪೋಹಂಸರೂಪಕವು ಶ್ರೀರಾಘವೇಂದ್ರ ಸ್ವಾಮಿಗಳಜೀವನ, ತಪಸ್ಸುಮತ್ತು ಅವರ ಆಧ್ಯಾತ್ಮಿಕ ಮಹಿಮೆಯನ್ನುಒಳಗೊಂಡಿದ್ದು,ಈ ಎಲ್ಲ ಸಂದೇಶಗಳನ್ನುಅತ್ಯಂತ ಆಕರ್ಷಕ ಹಾಗೂ ಮನರಂಜನಾತ್ಮಕರೀತಿಯಲ್ಲಿ ವೇದಿಕೆಯಲ್ಲಿಮೂಡಿಬರಲಿದೆ.ಸ್ವಪ್ನ ವೃಂದಾವನಸೋಂದ ವಾದಿರಾಜ ಸ್ವಾಮಿಗಳಅಧ್ಯಾತ್ಮಿಕ ಪಯಣ,ಜ್ಞಾನಪ್ರಚಾರಮತ್ತು ಭಕ್ತಿ ಪರಂಪರೆಯನ್ನುಒಳಗೊಂಡಿದೆ.

ಈಕಾರ್ಯಕ್ರಮವು ಸಮಾಜಮುಖಿಉದ್ದೇಶವನ್ನು ಹೊಂದಿದ್ದು,ಇಲ್ಲಿ ಸಂಗ್ರಹವಾಗುವಹಣವನ್ನು ಒಂಟಿ ಮಹಿಳೆಯರಜೀವನೋಪಾಯಕ್ಕಾಗಿ ಉಚಿತವಾಗಿಗೋದಾನದ ಮೂಲಕ ಡೈರಿ ಾರ್ಮಿಂಗ್‌ಗೆಪ್ರೋತ್ಸಾಹ ನೀಡಲು ಹಾಗೂ ಪ್ರಕೃತಿಸಂರಕ್ಷಣೆ ಮತ್ತು ಬಯೋ ಪಾರ್ಕ್ನಿರ್ಮಾಣ,ಕ್ಯಾನ್ಸರ್ಸೇರಿದಂತೆ ವಿವಿಧ ರೋಗ ನಿರೋಧಕಜಾಗೃತಿ ಮತ್ತು ನೆರವು ಕಾರ್ಯಕ್ರಮಗಳಿಗೆಬಳಸುವುದಾಗಿ ತಂಡದ ಮುಖ್ಯಸ್ಥರಾದಭರತ್ ಪ್ರಭಾತ್ ಮತ್ತು ಶರತ್ಪ್ರಭಾತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net