ಕೈಗಾರಿಕೆಗಳ ಪ್ರಭಾವದಿಂದ ಹೈನುಗಾರಿಕೆ ಕುಂಠಿತ / DODABALLAPUR

ದೊಡ್ಡಬಳ್ಳಾಪುರ ಮೋಪರಹಳ್ಳಿ ಡೇರಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುನಿ ಆಂಜಿನಪ್ಪ, ಉಪಾಧ್ಯಕ್ಷ ಹನುಮಂತ ಗೌಡ, ಕಾರ್ಯನಿರ್ವಾಹಕ ಡಾ.ಎಂ.ಚಿಕ್ಕಣ್ಣ, ನಿರ್ದೇಶಕರಾದ ರಾಮಪ್ಪ, ಕೃಷ್ಣಪ್ಪ, ಮುನಿಕೃಷ್ಣ್ಣ, ಮಾರಪ್ಪ, ನಾರಾಯಣಪ್ಪ, ಅಕ್ಕಮ್ಮ, ಭಾಗ್ಯಮ್ಮ, ವೆಂಕಟಲಕ್ಷ$್ಮಮ್ಮ, ಸದಸ್ಯರಾದ ಪ್ರಮೀಳಾ, ನಾಗೇಶ್​ ಮತ್ತಿತರರು ಇದ್ದರು.

Published on

ದೊಡ್ಡಬಳ್ಳಾಪುರ :

ಅತಿಯಾದ ಕೈಗಾರಿಕೆಗಳ ಸ್ಥಾಪನೆಯಿಂದ ಕೃಷಿ ಮತ್ತು ಹೈನುಗಾರಿಕೆ ಕುಂಠಿತವಾಗುತ್ತಿದೆ ಎಂದು

ಮೋಪರಹಳ್ಳಿ ಡೇರಿ ಕಾರ್ಯನಿರ್ವಾಹಕ ಡಾ.ಎಂ. ಚಿಕ್ಕಣ್ಣ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಭೂಮಿ ಕೈಗಾರಿಕೆಗಳ ಪಾಲಾಗುತ್ತಿದ್ದು, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತಿದೆ. ಇದರಿಂದ ಹಾಲಿನ ಪೂರೈಕೆ ಮೇಲೂ ಪರಿಣಾಮ ಬೀರುತ್ತಿದೆ. ರೈತರು ಬ್ಯಾಂಕ್​ಗಳಿಂದ ಸಾಲ ಪಡೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಂದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ರೈತರು ಸಂಕ್ಕೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು. ಕಳಪೆ ಹಾಲು ಪೂರೈಸಿದರೆ ರೈತರಿಗೆ ದೊರೆಯುವ ಸೌಲಭ್ಯಗಳಿಗೆ ತೊಂದರೆಯಾಗುವುದಲ್ಲದೆ, ಸಂದ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net