ಹೊಸಕೋಟೆ ತಾಲೂಕಿನ ಬ್ಯಾಲಹಳ್ಳಿಯಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ಶಾಸಕ ಶರತ್ ಬಚ್ಚೇಗೌಡ ಅವರು ಉದ್ಘಾಟಿಸಿ ರೈತರಿಗೆ ಪಶು ಆಹಾರ ವಿತರಿಸಿದರು. ರೈತರಿಗೆ ಉಚಿತವಾಗಿ ಹಾಲು ಸಂಗ್ರಹ ಕ್ಯಾನ್ ಹಾಗೂ ಪಶು ಆಹಾರ ವಿತರಣೆ ಮಾಡಲಾಯಿತು. ಎಲ್ ಆ್ಯಂಡ್ ಟಿ ಮಂಜುನಾಥ್ ಇದ್ದರು.
Published on:
Copied
Follow Us
ಹೊಸಕೋಟೆ : ಕಾಂಗ್ರೆಸ್ ಹೈನುಗಾರರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ರೈತರಿಗೆ ಅನುಕೂಲವಾಗಿದೆ. ಇನ್ನೂ ಎರಡು ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಪರಿಶೀಲನಾ ಹಂತದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತ ಮಹಿಳೆಯರಿಗೆ ಖಚಿತ ಆದಾಯದ ಮೂಲವಾಗಿ ಕೈಹಿಡಿದಿದೆ ಎಂದು ಹೇಳಿದರು.
ತಾಲೂಕಿನಲ್ಲಿ 202 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಎಲ್ಲ ಸಂಘಗಳಿಗೆ ಸ್ವಂತ ಕಟ್ಟಡಗಳಿವೆ. ಬೇಡಿಕೆಯಂತೆ ಬ್ಯಾಲಹಳ್ಳಿಯಲ್ಲಿ ನೂತನ ಹಾಲು ಶೇಖರಣಾ ಘಟಕ ಹಾಗೂ ಮೊದಲ ಮಹಡಿಯಲ್ಲಿ ಸಭಾ ಭವನ ನಿರ್ಮಿಸಲಾಗಿದೆ. ಡೇರಿಗೆ ಹಾಲು ಹಾಕುವವರಿಗೆ ಎರಡು ವಾರಕ್ಕೊಮ್ಮೆ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗಲಿದೆ. ಇದರಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಸಹಕಾರ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.
ಬಮುಲ್ ನಿರ್ದೇಶಕ ಕೆ.ಎಂ.ಎಂ. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 10 ಸಾವಿರ ಹೈನುಗಾರಿಕೆ ಕುಟುಂಬಗಳಿದ್ದು, ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸದ್ಯ ಎಂಟರಿಂದ ಎಂಟುವರೆ ಸಾವಿರಕ್ಕೆ ಕುಸಿದಿದೆ. ಆದರೆ, ಹಾಲು ಉತ್ಪಾದನೆಯಲ್ಲಿ ಪ್ರಗತಿಯಿದ್ದು, ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಮುತ್ಕೂರು ಮುನಿರಾಜ್ ಇತರರು ಇದ್ದರು.