ಡಿ. ದೇವರಾಜ ಅರಸು ಅವರು ರಾಜ್ಯ ಕಂಡ ಅಪರೂಪದ ಮುತ್ಸದ್ದಿ ನಾಯಕ

ಚಿಂಚೋಳಿ ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಾಹುಲ ಪಂಚಶೀಲ, ಡಾ. ಎಮ್. ಎನ್. ಸುಲ್ತಾನಪುರ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಹಸನ ಹುಸೇನ್, ಡಾ. ಅತೀಕ, ಡಾ. ಮಲ್ಲಿಕಾರ್ಜುನ ಪಾಲಮೂರ, ಅಶೋಕ ಹೂವಿನಬಾವಿ ಇತರರು ಇದ್ದರು.

Published on
ಚಿಂಚೋಳಿ: ಡಿ. ದೇವರಾಜ ಅರಸು ಅವರು ರಾಜ್ಯ ಕಂಡ ಅಪರೂಪದ ಮುತ್ಸದ್ದಿ ನಾಯಕ. ಸಾಮಾಜಿಕ ನ್ಯಾಯ, ಭೂಸುಧಾರಣೆ ಕಾಯ್ದೆ ಹಾಗೂ ಉಳುವವನೇ ಭೂಮಿಯ ಒಡೆಯ ಎನ್ನುವ ಐತಿಹಾಸಿಕ ನಿರ್ಧಾರಗಳ ಮೂಲಕ ಶೋಷಿತ ವರ್ಗಗಳಿಗೆ ಆಸರೆಯಾದವರು. ಅವರು ಜಾರಿಗೆ ತಂದ ಯೋಜನಾಬದ್ಧ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ಕ್ರಾಂತಿಗಳು ಇಂದಿಗೂ ನಮಗೆ ಮಾದರಿಯಾಗಿವೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ದೂರದೃಷ್ಟಿಯ ಆಡಳಿತವನ್ನು ಸ್ಮರಿಸಿದರು.
ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅರಸು ಅವರ ತತ್ತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಅವರ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮಾತನಾಡಿದರು.
ಇದಕ್ಕೂ ಮುಂಚೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಾಹುಲ ಪಂಚಶೀಲ, ಡಾ. ಎಮ್. ಎನ್. ಸುಲ್ತಾನಪುರ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಹಸನ ಹುಸೇನ್, ಡಾ. ಅತೀಕ, ಡಾ. ಮಲ್ಲಿಕಾರ್ಜುನ ಪಾಲಮೂರ, ಅಶೋಕ ಹೂವಿನಬಾವಿ, ತೀರ್ಥಪ್ಪ ಬಿರಾದಾರ, ಪ್ರೀಯದರ್ಶಿನಿ, ಸರಸ್ವತಿ, ಮಹಾದೇವಿ, ವಿಜಯಲಕ್ಷ್ಮಿ, ದೀಪಾ, ರೇಷ್ಮಬಾಯಿ, ಗೋಪಾಲ ಎಂ. ಪಿ, ಅಮರ ಲೋಡ್ಡನೂರ, ರೇವಣಸಿದ್ದಪ್ಪ ಮೋಘಾ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net