ಮೂಲತಃ ದೊಡ್ಡೆಲಚಗೆರೆ ಗ್ರಾಮದ ನಿವಾಸಿ ರಾಮಚಂದ್ರಯ್ಯ (72) ಮೃತರು. ಭಾನುವಾರ ಸಾಯಂಕಾಲ ಕಾರ್ಯ ನಿಮಿತ್ತ ರಾಮಚಂದ್ರಯ್ಯ ಸೈಕಲ್‌ನಲ್ಲಿ ದೊಡ್ಡೆಲಚಗೆರೆ ಗ್ರಾಮದಿಂದ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಹಿಂಬದಿಯಿಂದ ಬಂದು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತೀವವಾಗಿ ಗಾಯಗೊಂಡ ರಾಮಚಂದ್ರಯ್ಯ ಅವರನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.