

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಕುಖ್ಯಾತ ಸರಣಿ ಹಂತಕ ಸೈನೆಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್ನನ್ನು 2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವೈದ್ಯಕಿಯ ಸಾಕ್ಷ್ಯಗಳ ಕೊರತೆ:
⚠️
ಸಾಕ್ಷಿ ಹೇಳಿಕೆಗಳಲ್ಲಿ ವೈರುಧ್ಯ
ಘಟನೆ ನಡೆದ 4 ವರ್ಷಗಳ ನಂತರ (2010ರಲ್ಲಿ) ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆದರೆ ಆಭರಣ ಖರೀದಿಸಿದ್ದ ವ್ಯಾಪಾರಿಯ ಬಳಿ ಯಾವುದೇ ದಾಖಲೆಗಳಿಲ್ಲ. 4 ವರ್ಷಗಳ ಕಾಲ ಆಭರಣವನ್ನು ಹಾಗೆಯೇ ಇಟ್ಟುಕೊಂಡಿದ್ದರು ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಮಹಿಳೆಯ ಕುಟುಂಬದವರು ಆರಂಭದಲ್ಲಿ ಬೇರೆ ವ್ಯಕ್ತಿಗಳ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. 2009ರವರೆಗೂ ಈ ಆರೋಪಿಯ ಹೆಸರು ಎಲ್ಲೂ ಬಂದಿರಲಿಲ್ಲ. ಅಲ್ಲದೆ, ಕೊಲ್ಲೂರು ದೇವಾಲಯದ ಗೆಸ್ಟ್ಹೌಸ್ ಸಿಬ್ಬಂದಿಯ ಹೇಳಿಕೆಗಳು ಹಾಗೂ ಕೊಠಡಿ ಖಾಲಿ ಮಾಡಿದ ಸಮಯದ ದಾಖಲೆಗಳ ನಡುವೆ ಸ್ಪಷ್ಟ ಗೊಂದಲಗಳಿವೆ ಎಂದು ನ್ಯಾಯಪೀಠ ತಿಳಿಸಿದೆ.