ರೇವತಗಾಂವ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ವಿಠ್ಠಲ ಕಟಕಧೋಂಡ ನೆರವೇರಿಸಿದರು. ಆರ್.ಡಿ. ಹಕ್ಕೆ, ಐ.ಜಿ. ಬಿರಾದಾರ, ದೇವೇಂದ್ರ ವಾಗ್ಮೋಡೆ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ವಿಠ್ಠಲ ಕಟಕಧೋಂಡ ಅಭಿಮತ
ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ
ರೇವತಗಾಂವ :
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಮಂದಿರ ಕೇವಲ ಚಿಕಿತ್ಸಾ ಕೇಂದ್ರವಲ್ಲ, ಬದಲಿಗೆ ಕಾಯಿಲೆ ತಡೆಗಟ್ಟುವಿಕೆ, ಉತ್ತೇಜಕ, ಗುಣಪಡಿಸುವ, ಪುನರ್ವಸತಿ ಮತ್ತು ಉಪಶಮನಕಾರಿ ಸೇವೆ ಒಳಗೊಂಡ ಒಂದು ಸಮಗ್ರ ಆರೋಗ್ಯ ಕೇಂದ್ರ ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಘಟಕದ ವತಿಯಿಂದ ಶುಕ್ರವಾರ 15ನೇ ಹಣಕಾಸಿನ ಆಯೋಗದಡಿಯಲ್ಲಿ ಆಯುಷ್ಮಾನ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ದೇಶದ ಅಸ್ತಿತ್ವದಲ್ಲಿರುವ ಉಪ-ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಸಾರ್ವತ್ರಿಕವಾಗಿ ಉಚಿತ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕೇಂದ್ರಗಳು ಕೇವಲ ಕಾಯಿಲೆ ಗುಣಪಡಿಸುವುದಷ್ಟೇ ಅಲ್ಲದೆ, ತಾಯಿ-ಮಗುವಿನ ಆರೋಗ್ಯ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಮಾನಸಿಕ ಆರೋಗ್ಯ, ದಂತ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳ ಜತೆಗೆ ಯೋಗ ಮತ್ತು ಆಯುಷ್ ಪದ್ಧತಿಗಳನ್ನು ಒಳಗೊಂಡ ಕ್ಷೇಮ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತೇವೆ. ರೋಗಗಳು ತಡೆಗಟ್ಟುವಿಕೆ ಮತ್ತು ಪುನರ್ವಸತಿ ಆರೈಕೆಗೆ ಒತ್ತು ನೀಡುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆ ಸಾಧಿಸುವುದು ಈ ಯೋಜನೆ ಮುಖ್ಯ ಆಶಯವಾಗಿದೆ ಎಂದರು.
ಚಡಚಣ ಸಮುದಾಯ ಕೇಂದ್ರದ ಆಡಳಿತಾಧಿಕಾರಿ ಡಾ. ಎ.ಎನ್. ಅಗರಖೇಡ ಮಾತನಾಡಿ, ಆಯುಷ್ಮಾನ ಕೇಂದ್ರ ಕೇವಲ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸೀಮಿತವಾಗದೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ದಂತ ಚಿಕಿತ್ಸೆ, ಕಿವಿ, ಮೂಗು, ಗಂಟಲು, ಕಣ್ಣಿನ ಆರೈಕೆ ಮತ್ತು ಮಾನಸಿಕ ಆರೋಗ್ಯ ಬೆಂಬಲದಂತಹ ಸೇವೆ ಒಳಗೊಂಡಿವೆ ಎಂದು ಹೇಳಿದರು.
ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ. ಹಕ್ಕೆ, ಗುತ್ತಿಗೆದಾರ ಐ.ಜಿ. ಬಿರಾದಾರ, ಗ್ರಾಪಂ ಪಿಡಿಒ ದೇವೇಂದ್ರ ವಾಗ್ಮೋಡೆ, ಕಾರ್ಯದರ್ಶಿ ಮಾದೇವ ಪೂಜಾರಿ, ಸುರೇಶ ಬಗಲಿ, ಅಡವೇಪ್ಪ ನಡಗೇರಿ, ಕಾಮೇಶ ಪಾಟೀಲ, ಮನೋಹರ ಹಿರೇಮಠ, ಶಿವಣ್ಣ ಪಾಂಡ್ರೆ, ನಾಗಪ್ಪ ನಂದಗೊಂಡೆ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಧರ ಬಂಡಗರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ. ತೇಲಿ, ಸಿಬ್ಬಂದಿ, ಗ್ರಾಮಸ್ಥರು ಇತರರಿದ್ದರು.