ಭ್ರಷ್ಟಾಚಾರಕ್ಕೆ ಕಡಿವಾಣ / NELAMANGAL

ನೆಲಮಂಗಲದ ಡಾ. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಶಾಸಕ ಎನ್​.ಶ್ರೀನಿವಾಸ್​, ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ತಾಪಂ ಇಒ ಡಾ.ಬಿಂಧು, ಬಿಇಒ ರಮೇಶ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಜಿ.ಆನಂದ್​ ಇದ್ದರು.
ನೆಲಮಂಗಲದ ಡಾ. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಶಾಸಕ ಎನ್​.ಶ್ರೀನಿವಾಸ್​, ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ತಾಪಂ ಇಒ ಡಾ.ಬಿಂಧು, ಬಿಇಒ ರಮೇಶ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಜಿ.ಆನಂದ್​ ಇದ್ದರು.
Published on
ನೆಲಮಂಗಲ : ಡಾ.ಅಂಬೇಡ್ಕರ್​ ಅವರು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿ, ಭಾರತೀಯರಿಗೆ ಅರ್ಪಿಸಿದ ದಿನ ನಮ್ಮೆಲ್ಲರಿಗೂ ಸಂಭ್ರಮದ ದಿನವಾಗಿದೆ ಎಂದು ಶಾಸಕ ಎನ್​. ಶ್ರೀನಿವಾಸ್​ ತಿಳಿಸಿದರು.
ನಗರದ ಡಾ.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ದೇಶದ ಪ್ರೇಮ, ಗೌರವ ಹಾಗೂ ಸಮರ್ಪಣಾ ಮನೋಭಾವ ಬೆಳೆಸಿಕೊಂಡು ದೇಶದ ಏಳಿಗೆಗೆ ಸಹಕರಿಸಬೇಕು. ಭಾರತ ಪ್ರಪಂಚದಲ್ಲಿ ಅಭಿವೃದ್ಧಿ ಹಾಗೂ ವೇಗವಾಗಿ ಬೆಳೆಯುವ ದೇಶವಾಗಿದೆ ಎಂದರು.
ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಸಮಾಜದ ಎಲ್ಲ ವರ್ಗದವರಿಗೆ ನ್ಯಾಯ ನೀಡುತ್ತಿದೆ. ರಾಜ್ಯ ಸಮ&ಸಮಾಜ ಕಟ್ಟುವ ನಿಟ್ಟಿನಲ್ಲಿ 2.5 ವರ್ಷದಿಂದ ಎಲ್ಲ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಜತೆಗೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೇ ಜನರ ಮನೆ ಬಾಗಿಲಿಗೆ ಯೋಜನೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಪೊಲೀಸ್​, ಎನ್​ಸಿಸಿ, ಭಾರತ ಸೇವಾದಳ ಸ್ಕೌಟ್​ ಆ್ಯಂಡ್​ ಗೈಡ್ಸ್​, ವಿದ್ಯಾರ್ಥಿಗಳು ಹಾಗೂ ವಾದ್ಯಗೋಷ್ಠಿ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಜತೆಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜಾಗೂ ನಿವೃತ್ತ ಯೋಧ ಶಿವಕುಮಾರ್​ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಅಧ್ಯಕ್ಷೆ ಎನ್​.ಎಸ್​.ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದಿಪ್​, ನರಸಿಂಹಮೂರ್ತಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಸದಸ್ಯ ವೆಂಕಟೇಶ್​, ಅಂಜನಮೂರ್ತಿ, ಟಿಎಪಿಸಿಎಂಎಸ್​ ಅಧ್ಯಕ್ಷ ನರಸಿಂಹಮೂರ್ತಿ, ಲೋಲಾಕ್ಷಿಗಂಗಾಧರ್​, ದಾಕ್ಷಾಯಣಿ ರವಿಕುಮಾರ್​, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಮುಖಂಡ ವಸಂತ್​, ರವಿಕುಮಾರ್​ ಇತರರಿದ್ದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಪಥ : ತಾಲೂಕು ದಶಕಗಳಿಂದ ಕಾಣದ ಅಭಿವೃದ್ಧಿ ಕಾರ್ಯಗಳು 2.5 ವರ್ಷದಲ್ಲಿ ನಡೆಯುತ್ತಿದ್ದು, 1250 ಸಾವಿರ ಕೋಟಿಗೂ ಹೆಚ್ಚು ಅನುದಾನ ಸರ್ಕಾರ ನೀಡಿದೆ. ಕ್ಷೇತ್ರದಲ್ಲಿ ನಿವೇಶನ ಇಲ್ಲದ ಸಾವಿರಾರು ಕುಟಂಬಗಳಿಗೆ ನಿವೇಶನ ನೀಡಲು 230ಎಕರೆ ಸರ್ಕಾರಿ ಜಾಗವನ್ನು ಆಶ್ರಮ ಯೊಜನೆ ಗುರುತಿಸಲಾಗಿದೆ. ಶ್ರೀ ರಾಜೀವ್​ ಗಾಂಧಿ ವಸತಿ ಯೋಜನೆಗೆ ಹಸ್ತಾಂತರ ಮಾಡಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net