ಮಾತೃಭಾಷೆಯಿಂದಲೇ ಸಂಸ್ಕೃತಿ ಉಳಿವು

ಕಲಬುರಗಿಯಲ್ಲಿ ಮಂಗಳವಾರ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಚಾರಿ ಪೊಲೀಸ್​ ಅಧಿಕಾರಿಗಳನ್ನು ಸತ್ಕರಿಸಲಾಯಿತು. ದತ್ತಾತ್ರೇಯ ಪಾಟೀಲ್​ ರೇವೂರ, ಶರಣು ಪಪ್ಪಾ, ಶಿವಾನಂದ ತಗಡೂರು, ಜಿ.ಸಿ.ಲೋಕೇಶ, ವಿಜಯಕುಮಾರ ಪಾಟೀಲ್​, ಮುಡುಬಿ ಗುಂಡೇರಾವ್​, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ ಇತರರಿದ್ದರು.
ಕಲಬುರಗಿಯಲ್ಲಿ ಮಂಗಳವಾರ ನಡೆದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಚಾರಿ ಪೊಲೀಸ್​ ಅಧಿಕಾರಿಗಳನ್ನು ಸತ್ಕರಿಸಲಾಯಿತು. ದತ್ತಾತ್ರೇಯ ಪಾಟೀಲ್​ ರೇವೂರ, ಶರಣು ಪಪ್ಪಾ, ಶಿವಾನಂದ ತಗಡೂರು, ಜಿ.ಸಿ.ಲೋಕೇಶ, ವಿಜಯಕುಮಾರ ಪಾಟೀಲ್​, ಮುಡುಬಿ ಗುಂಡೇರಾವ್​, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಅಭಿಮತ
  • ಕಲಬುರಗಿಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ
ಕಲಬುರಗಿ: ಯಾವುದೇ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮಂಗಳವಾರ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನ, ಪುಸ್ತಕ ಪ್ರದರ್ಶನ ಹಾಗೂ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾಷಾ ಕಲಿಕೆಯಿಂದ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಬಹುದು. ಕಲ್ಯಾಣ ಕರ್ನಾಟಕ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿ ಪರಿಹಾರಕ್ಕಾಗಿ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹೆತ್ತ ತಾಯಿಗೆ ಕೊಡುವಂಥ ಪ್ರೀತಿ ಗೌರವ ಮಾತೃಭಾಷೆ ಕನ್ನಡಕ್ಕೂ ಕೊಡಬೇಕು. ನಾವೆಲ್ಲರೂ ಕನ್ನಡದ ಕಟ್ಟಾಭಿಮಾನಿಗಳಾಗಬೇಕು. ನಿರಂತರವಾಗಿ ಪತ್ರಿಕೆ ಓದುವ, ಬರೆಯುವ ಮೂಲಕ ಭಾಷೆ ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, 112 ವರ್ಷದ ಇತಿಹಾಸದಲ್ಲಿ ಪರಿಷತ್​ ಕಾರ್ಯಗಳು ನಾಡಿನ ಅಸ್ಮಿತೆಯಂತೆ ಬೆಳಕು ಚೆಲ್ಲಿವೆ. ಕೇವಲ ಸಾಹಿತಿಗಳಿಗೆ ಸೀಮಿತಗೊಳಿಸದೆ ಜನಸಾಮಾನ್ಯರ ಪರಿಷತ್​ ಆಗಿ ರೂಪಿಸಲಾಗಿದೆ. ಯಾವುದೇ ರೀತಿಯಲ್ಲಿ ಕಸಾಪ ನತೆಗೆ ಚ್ಯುತಿ ಬರದಂತೆ ಗೌರವ ಎತ್ತಿ ಹಿಡಿಯಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣು ಪಪ್ಪಾ , ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ್​ ಮಾತನಾಡಿದರು.
ಪತ್ರಕರ್ತರ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ವೈದ್ಯ ಸೇವಕಿ ಡಾ.ನಾಗವೇಣಿ ಪಾಟೀಲ್​, ನಗರ ಸಂಚಾರ ಉಪ ವಿಭಾಗದ ಪೊಲೀಸ್​ ಸಹಾಯಕ ಆಯುಕ್ತ ಡಿ.ಟಿ. ಪ್ರಭು, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಸೈಯದ್​ ನಜಿರುದ್ದಿನ್​ ಮುತ್ತವಲ್ಲಿ, ಶಿವಲೀಲಾ ಕಲಗುರ್ಕಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್​, ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಬಾಬುರಾವ ಪಾಟೀಲ್​, ಧರ್ಮರಾಜ ಜವಳಿ, ಅಮೃತಪ್ಪ ಅಣೂರ, ಜಗದೀಶ ಮರಪಳ್ಳಿ ಇದ್ದರು.
ಸಾಹಿತಿಗಳಾದ ನಾರಾಯಣ ಕುಲಕರ್ಣಿ, ಈಶ್ವರ ಇಂಗನ್​, ಡಾ.ಅಂಬುಜಾ ಮಳಖೇಡಕರ್​, ಸಿದ್ಧಲಿಂಗಯ್ಯ ಸ್ವಾಮಿ, ಪಂಚಾಕ್ಷರಿ ಪೂಜಾರಿ, ಡಾ.ಗೀತಾ ಪಾಟೀಲ್​, ಪತ್ರಕರ್ತರಾದ ಜಯತೀರ್ಥ ಪಾಟೀಲ್​, ಶೇಷಮೂರ್ತಿ ಅವಧಾನಿ, ಭವಾನಿಸಿಂಗ್​ ಠಾಕೂರ್​, ಡಿ. ಶಿವಲಿಂಗಪ್ಪ, ಶಿವರಾಯ ದೊಡ್ಮನಿ, ಬಸವರಾಜ ಚಿನಿವಾರ, ದೇವಿಂದ್ರಪ್ಪ ಆವಂಟಿ, ವಿ.ಎನ್​. ಮಲ್ಲಿಕಾರ್ಜುನ, ಚಂದ್ರಕಾಂತ ಹಾವನೂರ, ಕಸಾಪ ಹಿರಿಯ ಸದಸ್ಯ ಡಾ.ಸಿದ್ರಾಮಯ್ಯ ಮಠ, ಸಂಗನಬಸಪ್ಪ ಹಿರೇಗೌಡ, ಶ್ರೀಶೈಲ ಮೂಲಗೆ, ನವೀನ್​ ಕಲಬುರಗಿ, ವೀರಭದ್ರಪ್ಪ ಓತಿ, ಸಿದ್ಧರಾಮ ನಿರೋಣಿ, ಬಿ.ಜಯಸಿಂಗ್​, ಮಲ್ಲಪ್ಪ ಮದನಕರ್​, ಶಿವಕುಮಾರ ಅಲ್ಲೂರ, ಸಂಚಾರಿ ಪೊಲೀಸ್​ ವಿಭಾಗದ ಅಧಿಕಾರಿಗಳಾದ ಶಾಂತಾಬಾಯಿ ಪತ್ತಾರ, ಅನೀಲ ಜೈನ್​, ಅರ್ಜುನಸಿಂಗ್​ ಠಾಕೂರ್​, ಜಗದೇವ ಎಂಟಮನಿ, ಬಸವರಾಜ ಯಳಸಂಗಿ, ರಾಜಕುಮಾರ ಹಡಪದ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಸಂಗೀತ ಕಲಾವಿದರಾದ ಮಹೇಶ ತುಪ್ಪದ ಮತ್ತು ಸಂಗಡಿಗರು ನಡೆಸಿಕೊಟ್ಟ ಸಂಗೀತ ಸುಧೆ ಗಮನಸೆಳೆಯಿತು.
"

ಸ್ವಾತಂತ್ರ್ಯಪೂರ್ವದಿಂದಲೇ ನಾಡು&ನುಡಿ ಕಟ್ಟಲು ಪ್ರಾತಿನಿಧಿಕ ಸಂಸ್ಥೆಯೊಂದನ್ನು ಅಂದಿನ ಹಿರಿಯರು ಸ್ಥಾಪನೆ ಮಾಡಿದರು. ಅದಕ್ಕಾಗಿ ಇಂದು ನಾವೆಲ್ಲ ಸಾಂಸತಿಕ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರ ತೊಗರಿ ನಾಡಿನತ್ತ ಗಮನಹರಿಸಬೇಕಾಗಿದೆ.

— > ಶಿವಾನಂದ ತಗಡೂರು ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net