ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ

ಅಫಜಲಪುರ ಹಿಂಗುಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳು, ಗುರುಗಳನ್ನು ಸತ್ಕರಿಸಲಾಯಿತು. ಸ್ವಾಮಿನಾಥ ಅಂಬೂರೆ, ಶಿವಾಜಿ ಲೋಖಂಡೆ, ಮಾರುತಿ ನಾತೆ, ಜ್ಯೋತಿ ಅಂಬೂರೆ, ಮಾರುತಿ ಅಂಬೂರೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಮಿನಾಥ ಅಂಬೂರೆ ಕರೆ
  • ಅಫಜಲಪುರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
 ಅಫಜಲಪುರ: ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರವಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಸ್ವಾಮಿನಾಥ ಅಂಬೂರೆ ಹೇಳಿದರು.
ಹಿಂಗುಲಾಬಿಕಾ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಗಳ ಸೇವೆ, ತ್ಯಾಗ ಹಾಗೂ ಸಮಾಜ ನಿರ್ಮಾಣ ಕಾರ್ಯ ಶ್ರೇಷ್ಠವಾದದ್ದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಉಪಾಧ್ಯ ಶಿವಾಜಿ ಲೋಖಂಡೆ, ಪ್ರಮುಖರಾದ ಮಾರುತಿ ನಾತೆ, ಜ್ಯೋತಿ ಅಂಬೂರೆ, ಮಾರುತಿ ಅಂಬೂರೆ, ದೇವಿದಾಸ ಅಂಬೂರೆ, ವಿಕಾಸ ಅಂಬೂರೆ, ರತ್ನಾಕರ ಅಂಬೂರೆ, ಗುರುನಾಥ ಲೋಖಂಡೆ, ಮಾರುತಿ ಅಂಬೂರೆ, ಸುಶೀಲ ಅಂಬೂರೆ, ರತಾ ಅಂಬೂರೆ, ಭವಾನಿ ಅಂಬೂರೆ ಇತರರಿದ್ದರು.
ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಭಾವಸಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net