ಭಾನುವಾರ ಕಬ್ಬನ್ ಪಾರ್ಕ್ ಹೋಗೋ ಪ್ಲ್ಯಾನ್ ಬಿಟ್ಬಿಡಿ; ಈ ಮಾರ್ಗದಲ್ಲಿ, ಇಷ್ಟು ಗಂಟೆಯವರೆಗೂ ಮೆಟ್ರೋ ಸೇವೆ ಇರಲ್ಲ..Metro
BMRCL
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೇ.17 ರಂದು ಕಬ್ಬನ್ ಪಾರ್ಕ್-ಹೊಸಹಳ್ಳಿ ಮೆಟ್ರೋ ಸಂಚಾರ ಸ್ಥಗಿತ
ಮೆಜೆಸ್ಟಿಕ್- ಸೆಂಟ್ರಲ್ ಕಾಲೇಜು ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಈ ಕ್ರಮ
ಬೆಳಿಗ್ಗೆ 7ರಿಂದ 9ರವರೆಗೂ ಕಬ್ಬನ್ ಪಾರ್ಕ್-ಹೊಸಹಳ್ಳಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು: ಮೇ.17ರಂದು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಕಾರ್ಯಾಚರಣೆ ಇರುವ ಕಾರಣ ಹೊಸಹಳ್ಳಿಯಿಂದ ಕಬ್ಬನ್ ಪಾರ್ಕ್ವರೆಗೂ ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(BMRCL) ಪ್ರಕಟಣೆ ಹೊರಡಿಸಿದೆ.
ಕಾರಣ ಏನು?
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನ ಮೆಟ್ರೋ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಭಾನುವಾರ ತಾತ್ಕಾಲಿಕವಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಷ್ಟರಿಂದ ಎಷ್ಟು ಗಂಟೆಗೆ ಸಂಚಾರ ಸ್ಥಗಿತ?
ಸಾಮಾನ್ಯವಾಗಿ ಭಾನುವಾರ ಮೆಟ್ರೋ ಸ್ವಚ್ಛತೆ ಇರುತ್ತದೆ. ಹೀಗಾಗಿ ನಿತ್ಯ ಐದಕ್ಕೆ ಸೇವೆ ಒದಗಿಸುವ ಮೆಟ್ರೋ ಏಳಕ್ಕೆ ಕಾರ್ಯಾಚರಣೆ ಶುರು ಮಾಡುತ್ತದೆ. ಆದರೆ, ಈ ಬಾರಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮುಂಜಾನೆ 7ರಿಂದ 9 ಗಂಟೆಯವರೆಗೆ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಲಾಗಿರುತ್ತದೆ ಎನ್ನಲಾಗಿದೆ.
ಯಾವ್ಯಾವ ಮಾರ್ಗದಲ್ಲಿ ಸಂಚಾರ ವ್ಯತ್ಯಯ?
ಹೊಸಹಳ್ಳಿ ಮೆಟ್ರೋದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದವರೆಗೂ ಸಂಚಾರ ಸ್ಥಗಿತಗೊಂಡಿರುತ್ತದೆ. ಇನ್ನು ಚಲ್ಲಘಟ್ಟದಿಂದ ವಿಜಯನಗರದವರೆಗೂ ಹಾಗೂ ವೈಟ್ ಫೀಲ್ಡ್ನಿಂದ ಎಂಜಿ ರಸ್ತೆವರೆಗೂ ಎಂದಿನಂತೆ ಕಾರ್ಯಾಚರಣೆ ನಡೆಯಲಿದೆ ಎಂದು ಮೆಟ್ರೋ ನಿಗಮ ಮಾಹಿತಿ ಹೊರಡಿಸಿದೆ.
ಮಾದಾವರದಿಂದ ರೇಷ್ಮೇ ಸಂಸ್ಥೆವರೆಗಿನ ಹಸಿರು ಮಾರ್ಗ ಹಾಗೂ ಬೊಮ್ಮಸಂದ್ರದಿಂದ ಆರ್ವಿ ಕಾಲೇಜಿನ ಮೆಟ್ರೋ ನಿಲ್ದಾಣದ ಎಲ್ಲೋ ಲೈನ್ನಲ್ಲಿ ಯಾವುದೇ ವಿಳಂಬವಿರೋದಿಲ್ಲ. ಪ್ರಯಾಣಿಕರು ಎಂದಿನಂತೆ ಈ ಮಾರ್ಗದಲ್ಲಿ ಸಂಚರಿಸಿ..
ಪರ್ಯಾಯ ಮಾರ್ಗವೇನು?
ಭಾನುವಾರ ಐಟಿ-ಬಿಟಿ ಕಂಪನಿಗಳಿಗೆ ರಜೆ ಇರುವ ಕಾರಣ ಸಾಮಾನ್ಯವಾಗಿ ಎಂಜಿ ರೋಡ್, ರಿಚ್ಮಂಡ್ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ಸವಾರರ ಓಡಾಟ ಕಡಿಮೆ ಇರುವ ಕಾರಣ ಬಸ್ನಲ್ಲಿ ಹೆಚ್ಚು ಟ್ರಾಫಿಕ್ ಜಂಜಾಟವಿಲ್ಲದೆ ಪ್ರಯಾಣಿಸಬಹುದು, (ಏಜೆನ್ಸೀಸ್).