ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜ, ಮರ ಕೆಲಸಗಾರರ ಸಂಘ, ಚಿನ್ನಬಳ್ಳಿ ಕೆಲಸಗಾರರ ಸಂಘ, ಚಿನ್ನಬಳ್ಳಿ ವರ್ತಕರ ಸಂಘ, ಮಹಿಳಾ ಹಾಗೂ ನೌಕರರ ಸಂಘದ ವತಿಯಿಂದ ಪಟ್ಟಣದ ಕಾಳಿಕಾಂಬ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಚಿನ್ನಾಭರಣ ತಯಾರಿಕೆ, ಕಮ್ಮಾರಿಕೆ, ಮರಗೆಲಸ, ಶಿಲ್ಪಕಲೆ, ಲೋಹದ ಕೆಲಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಲೆಮಾರುಗಳಿಂದ ಪರಿಣತಿ ಹೊಂದಿರುವ ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳು ಇಂದು ಮಾರುಕಟ್ಟೆಯ ಬದಲಾವಣೆ ಎದುರಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಉತ್ಪಾದನೆ, ಯಂತ್ರಾಧಾರಿತ ತಯಾರಿಕೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಮಾರುಕಟ್ಟೆಗೆ ತರುವ ವ್ಯವಸ್ಥೆಯಿಂದ ಸಾಂಪ್ರದಾಯಿಕ ಕುಶಲಕರ್ಮಿಗಳ ಉತ್ಪನ್ನಗಳಿಗೆ ಸ್ಪರ್ಧೆ ಹೆಚ್ಚಾಗಿದೆ ಎಂದರು.