3ರಿಂದ ಕ್ರಿಕೇಟ್​ ಪಂದ್ಯಾವಳಿ ಆರಂಭ

,
,
Published on
ಯಾದಗಿರಿ: ಇಲ್ಲಿನ ಶ್ರೀದೇವಿ ಟ್ರಸ್ಟ್​ ಹಾಗೂ ಎಂಎಸ್​ಎ ಆಂಗ್ಲ ಮಾಧ್ಯಮ ಪಬ್ಲಿಕ್​ ಶಾಲೆಯಿಂದ ಸಾಫ್ಟ್​ ಬಾಲ್​ ಕ್ರಿಕೆಟ್​ ಪಂದ್ಯಾವಳಿ ಮೇ 3ರಿಂದ ನಗರದ ಗಂಜ್​ಏರಿಯಾದ ಸೈದನ್​ ಸಾಬ್​ ದರ್ಗಾದ ಬಳಿ ಇರುವ ಎಂಎಸ್​ಎ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್​ನ ಪ್ರಮುಖ ಮೌಲಾಲಿ ಅನಪೂರ ಹೇಳಿದರು. ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಿಕೆಟ್​ ಟೂರ್ನಿಮೆಂಟ್​ನಲ್ಲಿ ವಿಜೇತರಾದವರಿಗೆ ಹಣುಮೇಗೌಡ ಬೀರನಕಲ್​ ಅವರು ಪ್ರಥಮ ಬಹುಮಾನ 21,001 ರೂ. ಮತ್ತು ಟ್ರೋಫಿ, ದ್ವೀತಿಯ ಬಹುಮಾನವನ್ನು ಮೌಲಾಲಿ ಅನಪುರ ಅವರು ದ್ವೀತಿಯ ಬಹುಮಾನ 11,001 ರೂ. ಹಾಗೂ ಟ್ರೋಫಿ ಮತ್ತು ಅಶೋಕ ವಾಟಕರ್​ ಅವರು ತೃತೀಯ ಬಹುಮಾನ ಅ 5,001 ರೂ. ಹಾಗೂ ಟ್ರೋಫಿ ನೀಡಲಿದ್ದಾರೆ ಎಂದರು.
ಯು.ಉಮೇಶ ಅವರು ಪಂದ್ಯ ಶ್ರೇಷ್ಠ ಪುರುಷನಿಗೆ 2,001ರೂ. ಉತ್ತಮ ಬೌಲರ್​ಗೆ 1,001 ರೂ. ಹಾಗೂ ಉತ್ತಮ ಬ್ಯಾಟ್ಸಮನ್​ಗೆ 1,001 ನೀಡಲಿದ್ದಾರೆ ಎಂದರು. ನಗರದ ಕ್ರಿಕೇಟ್​ ಆಟಗಾರರು ಹೆಚ್ಚಿನ ತಂಡಗಳೊಂದಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು, ತಂಡದ ಹೆಸರು ನೋಂದಾಯಿಸಲು ಮೇ 2 ಕೊನೇ ದಿನವಾಗಿದೆ ಎಂದರು. ಅಶೋಕ ವಾಟಕರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net