ಕ್ರೀಡೆಯಿಂದ ಆರೋಗ್ಯಕರ ವಾತಾವಣರ ನಿರ್ಮಾಣ

ಕೆಂಭಾವಿ ಪಟ್ಟಣದ ಹಿಲ್​ಟಾಪ್​ ಕಾಲನಿ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಎನ್​ಆರ್​ಜಿ ಟ್ರೋಫಿ ಕ್ರಿಕೆಟ ಪಂದ್ಯಾವಳಿಯಲ್ಲಿ ಕೃಷ್ಣ ಮುದನೂರ ಮಾತನಾಡಿದರು. ಶ್ರೀ ಚನ್ನಬಸವ ಶಿವಾಚಾರ್ಯ, ಮಹಿಪಾಲರೆಡ್ಡಿ ಡಿಗ್ಗಾವಿ, ವೆಂಕೋಬ ದೊರೆ, ಪರಶುರಾಮ ಇತರರಿದ್ದರು.
ಕೆಂಭಾವಿ ಪಟ್ಟಣದ ಹಿಲ್​ಟಾಪ್​ ಕಾಲನಿ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಎನ್​ಆರ್​ಜಿ ಟ್ರೋಫಿ ಕ್ರಿಕೆಟ ಪಂದ್ಯಾವಳಿಯಲ್ಲಿ ಕೃಷ್ಣ ಮುದನೂರ ಮಾತನಾಡಿದರು. ಶ್ರೀ ಚನ್ನಬಸವ ಶಿವಾಚಾರ್ಯ, ಮಹಿಪಾಲರೆಡ್ಡಿ ಡಿಗ್ಗಾವಿ, ವೆಂಕೋಬ ದೊರೆ, ಪರಶುರಾಮ ಇತರರಿದ್ದರು.
Published on
ಕೆಂಭಾವಿ: ಕ್ರೀಡೆಗಳು ಯುವಕರಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗಿವೆ ಎಂದು ಜಿಲ್ಲಾ ಕಾಂಗ್ರೇಸ್​ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ಹಿಲ್​ಟಾಪ್​ ಕಾಲನಿ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಎನ್​ಆರ್​ಜಿ ಕ್ರಿಕೆಟ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ವೃದ್ಧಿ ಜತೆಗೆ ಸ್ನೇಹಮಯಿ ಜೀವನ ನಡೆಸಲು ಇಂಥ ಕ್ರೀಡೆಗಳು ಸಹಕಾರಿಯಾಗಿವೆ. ಬೇಸಿಗೆ ದಿನಗಳಲ್ಲಿ ಹೆಚ್ಚು ಶ್ರಮ ಪಡದೆ ಆದಷ್ಟು ಬೆಳಗಿನ ಜಾವದಲ್ಲಿ ಕ್ರೀಡೆಗಳನ್ನು ಆಡುವುದು ಬಹಳ ಸೂಕ್ತ ಎಂದು ಸಲಹೆ ನೀಡಿದರು.
ಬಿಜೆಪಿ ಯುವ ಟಕದ ಕೃಷ್ಣಾರೆಡ್ಡಿ ಮುದನೂರ ಮಾತನಾಡಿ, ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಅವರ ಸಹಕಾರ ಮತ್ತು ಸಹಾಯದಿಂದ ಸುರಪುರ ಹಾಗೂ ಹುಣಸಗಿ ತಾಲೂಕಿನ ಹಲವೆಡೆಡ ಕ್ರಿಕೆಟ್​ ಆಟಗಳನ್ನು ನಿಯೋಜನೆ ಮಾಡುತ್ತಿದ್ದು ಅಪ್ಪಟ ಗ್ರಾಮೀಣ ಪ್ರತಿಭೆಗಳು ಹೊರಬಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದೆ ಈ ಟೂರ್ನಿಯ ಉದ್ದೇಶ ಎಂದು ಹೇಳಿದರು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ಪುರಸಭೆ ಸದಸ್ಯ ರಾವೇಂದ್ರ ಕವಾಲ್ದಾರ, ಎಚ್​. ಆರ್​. ಬಡಿಗೇರ, ವೆಂಕೋಬ ದೊರೆ, ಜಾವೇದ, ಪರಶುರಾಮ, ನಿತಿನ, ಶಿವು ಮಲ್ಲಿಬಾವಿ, ಸೋಹೆಲ್​ ಸಾಸನೂರ ಹಲವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net