ಕೆಲ ದಿನಗಳ ಹಿಂದಷ್ಟೆ, ರವಿಚಂದ್ರನ್ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಿನಿಮಾದಲ್ಲಿ ಬೇಟಿಯಾಗಿದ್ದರು. ಆ ಸಮಯದಲ್ಲಿ ಈ ಬೇಟಿ ಏತಕ್ಕಾಗಿ ನಡೆದಿರಬಹುದು? ಎಂಬ ಚರ್ಚೆ ಜೋರಾಗಿತ್ತು. ಈಗ ತಿಳಿದಿರುವ ಮಾಹಿತಿ ಪ್ರಕಾರ, ರವಿಚಂದ್ರನ್ ಅವರನ್ನು ಮೇಲ್ಮೆನೆಗೆ ಕಳುಹಿಸಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಇನ್ನೇನು ಕೆಲವೇ ಗಂಟೆ ಅಥವಾ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.