

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಷ್ಟ್ರೀಯಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಸಂಸ್ಥೆ (ನಿಮ್ಹಾನ್ಸ್)ಆರೋಗ್ಯ ತಂತ್ರಜ್ಞಾನವಲಯದಲ್ಲಿ ಮಹತ್ವದ ಮೈಲಿಗಲ್ಲುಸ್ಥಾಪಿಸಿದ್ದು,ರಕ್ತನಾಳಗಳಒಳಗಿನಿಂದ ಮಾಡುವ ಚಿಕಿತ್ಸೆಗೆ ದೇಶದ ಮೊದಲ ‘ಎಂಡೋವಾಸ್ಕುಲರ್ರಿಸರ್ಚ್ ಆ್ಯಂಡ್ ಇನ್ನೋವೇಶನ್’(ಇವಿಆರ್‌ಐ)ಪ್ರಯೋಗಾಲಯವನ್ನುಆರಂಭಿಸಿದೆ.
ನಿಮ್ಹಾನ್ಸ್‌ನಲ್ಲಿನಡೆದ ‘ಆತ್ಮನಿರ್ಭರ ಭಾರತ;ನರವಿಜ್ಞಾನದಲ್ಲಿಸ್ವಾವಲಂಬನೆ -ಬೌದ್ಧಿಕ ಆಸ್ತಿಹಕ್ಕುಗಳು’ ಕಾರ್ಯಾಗಾರದಲ್ಲಿನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರಭಾ ಎಸ್.ಚಂದ್ರ ಪ್ರಯೋಗಾಲಯಉದ್ಘಾಟಿಸಿದರು.
ಕೇಂದ್ರದಅನುಸಂಧಾನ್ ನ್ಯಾಷನಲ್ ರಿಸರ್ಚ್ೌಂಡೇಶನ್ ಧನ ಸಹಾಯದೊಂದಿಗೆ ಈಪ್ರಯೋಗಾಲಯ ನಿರ್ಮಾಣ ಮಾಡಲಾಗಿದ್ದು,ಸಂಪೂರ್ಣವಾಗಿನರರೋಗ ತಂತ್ರಜ್ಞಾನಗಳ ಸಂಶೋಧನೆಮತ್ತು ಅಭಿವೃದ್ಧಿಗಾಗಿಯೇಮೀಸಲಾಗಿದೆ.ನರವಿಜ್ಞಾನಕ್ಷೇತ್ರದಲ್ಲಿ ಹೊಸ ಆವಿಷ್ಕಾರ,ಬೌದ್ಧಿಕ ಆಸ್ತಿಹಕ್ಕುಗಳ ಸೃಷ್ಟಿ ಮತ್ತು ವೈದ್ಯಕೀಯಉಪಕರಣಗಳ ಅಭಿವೃದ್ಧಿಗೆ ಉತ್ತೇಜನನೀಡಲಿದೆ. ಜತೆಗೆ,ನರರೋಗಗಳತಂತ್ರಜ್ಞಾನ,ವಿನ್ಯಾಸ,ಚಿಕಿತ್ಸಾವಿಧಾನಗಳ ಬಗ್ಗೆಯೂ ಇಲ್ಲಿನಿರಂತರವಾಗಿ ಸಂಶೋಧನೆಗಳುನಡೆಯಲಿವೆ. ಕಡಿಮೆವೆಚ್ಚದ ಆರೋಗ್ಯ ರಕ್ಷಣೆ ಮತ್ತುಆತ್ಮನಿರ್ಭರ ಭಾರತದ ಕನಸನ್ನುನನಸು ಮಾಡಲು ವೈದ್ಯರುಗಳೇಮುಂಚೂಣಿಯಲ್ಲಿ ನಿಂತು ಸಂಶೋಧನೆಮತ್ತು ಆವಿಷ್ಕಾರಗಳನ್ನುಮಾಡಲಿದ್ದಾರೆ ಎಂದು ಸಂಸ್ಥೆತಿಳಿಸಿದೆ.
ಈ ವೇಳೆರಾಷ್ಟ್ರೀಯ ವೈದ್ಯಕೀಯ ಆಯೋಗದಮಾಜಿ ಅಧ್ಯಕ್ಷ ಪದ್ಮಶ್ರೀ ಡಾ.ಬಿ.ಎನ್.ಗಂಗಾಧರ್,ಆರ್.ವಿ.ಎಂಜಿನಿಯರಿಂಗ್ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎನ್.ಸುಬ್ರಮಣ್ಯಇವಿಆರ್‌ಐ ಲ್ಯಾಬ್‌ನ ಮುಖ್ಯಸಂಶೋಧಕ ಡಾ.ಲಿಂಗರಾಜು ಟಿ.ಎಸ್.,ಐಐಎಸ್‌ಸಿ,ಐಐಎಂ ಬೆಂಗಳೂರು,ಸಿ-ಕ್ಯಾಂಪ್ಪ್ರತಿನಿಧಿಗಳು ಉಪಸ್ಥಿತರಿದ್ದರು.
ತೀವ್ರಪಾರ್ಶ್ವವಾಯು ಚಿಕಿತ್ಸೆಗಾಗಿದೇಶಿಯವಾಗಿ ಅಭಿವೃದ್ಧಿಪಡಿಸಲಾದ‘ಪರಿಚಯ್’ ಎಂಬ ಮೆಕ್ಯಾನಿಕಲ್ಥ್ರೊಂಬೆಕ್ಟಮಿ ಸಾಧನದ ಮೊದಲಪ್ರೋಟೋ-ಟೈಪ್(ಮಾದರಿ)ಅನ್ನುಅನಾವರಣಗೊಳಿಸಲಾಗಿದ್ದು,ನಿಮ್ಹಾನ್ಸ್ಸಂಸ್ಥೆಯ ಈ ಹೆಜ್ಜೆಯು ಭಾರತವನ್ನುಜೈವಿಕ ವೈದ್ಯಕೀಯ ಆವಿಷ್ಕಾರದಲ್ಲಿಮತ್ತಷ್ಟು ಬಲಿಷ್ಠಗೊಳಿಸಲಿದ್ದು,ರೋಗಿಗಳಿಗೆಕೈಗೆಟುಕುವ ದರದಲ್ಲಿ ಗುಣಮಟ್ಟದಚಿಕಿತ್ಸೆ ಸಿಗುವಂತೆ ಮಾಡಲುನೆರವಾಗಲಿದೆ.