ನಕಲಿ ಸೌಂದರ್ಯ ವರ್ಧಕಗಳ ಪತ್ತೆ ಕಾರ್ಯಾಚರಣೆ

cosmetics samples drawn by Drugs inspector
cosmetics samples drawn by Drugs inspector
Published on

ಪ್ರಮುಖ ಮುಖ್ಯಾಂಶಗಳು

  • * 10 ಕಡೆ ದಾಳಿ, ಲಿಪ್‌ಸ್ಟಿಕ್, ಪೌಡರ್ ಸೇರಿ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ ಕ್ರಮ

ಬೆಂಗಳೂರು: ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಕಳಪೆ ಹಾಗೂ ನಕಲಿ ಸೌಂದರ್ಯ ವರ್ಧಕಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಲಿಪ್‌ಸ್ಟಿಕ್, ಪೌಡರ್, ಫೇಶಿಯಲ್ ಕ್ರೀಮ್ ಮತ್ತು ಸ್ಕಿನ್ ಸೆರಮ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ವಿಶ್ಲೇಷಣೆಗೆ ಕಳುಹಿಸಿದ್ದಾರೆ.
ಕೆಲವು ಸೌಂದರ್ಯವರ್ಧಕ ಹಾಗೂ ಲಿಪ್‌ಸ್ಟಿಕ್ ಮಾದರಿಗಳಲ್ಲಿ ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನಿಕ್) ಮತ್ತು ಹಾನಿಕಾರಕ ಲೋಹದ ಅಂಶಗಳು ಪತ್ತೆಯಾಗಿವೆ. ಜತೆಗೆ ಕಾಸ್ಮೆಟಿಕ್ಸ್ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ.
ಹೀಗಾಗಿ ವಿವಿದೆಡೆ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಕಳಪೆ ಅಥವಾ ನಕಲಿ ಉತ್ಪನ್ನಗಳ ಮಾರಾಟ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net