

ಪ್ರಮುಖ ಮುಖ್ಯಾಂಶಗಳು
ವರದಿ ಆಧರಿಸಿ ಮುಂದಿನ ಆದೇಶ
ತಂದೆ-ತಾಯಿ ಇಬ್ಬರೂ ನಿಮಾನ್ಸ್ನ ಹಿರಿಯ ಮನೋವೈದ್ಯರ ಮುಂದೆ ಹಾಜರಾಗಿ ಕೌನ್ಸೆಲಿಂಗ್ ಪಡೆದುಕೊಳ್ಳಬೇಕು. 5 ವರ್ಷದ ಮಕ್ಕಳನ್ನು ಬಲವಂತವಾಗಿ ಮಾನಸಿಕ ಮೌಲ್ಯಮಾಪನಕ್ಕೆ ಒಳಪಡಿಸುವುದು ಸುರತವಲ್ಲ. ನಿಮ್ಹಾನ್ಸ್ ವೈದ್ಯರು ಪಾಲಕರ ವರ್ತನೆ ಮತ್ತು ಪಾಲನಾ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ನಡೆಸಿ, ಮೂರು ತಿಂಗಳೊಳಗೆ ಕೌಟುಂಬಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಆ ವರದಿಯನ್ನು ಆಧರಿಸಿ ಕೌಟುಂಬಿಕ ನ್ಯಾಯಾಲಯವು ಮಕ್ಕಳ ಪಾಲನೆ ಹಕ್ಕಿಗೆ ಸಂಬಂಧಿಸಿ ಮುಂದಿನ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.