ಸಹಕಾರ ಸಂಘದಿಂದ ರೈರಿಗೆ ಸೌಲಭ್ಯ / CHANARAYAPATTANA

ದೇವನಹಳ್ಳಿ ತಾಲೂಕು ಬೂದಿಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ಎಂ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಬೂದಿಗೆರೆ ಸೊಸೈಟಿ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್​ ಗೌಡ, ಖಾದಿ ಬೋರ್ಡ್​ ಮಾಜಿ ಅಧ್ಯಕ್ಷ ಲಕ್ಷ$್ಮಣ್​ ಮೂರ್ತಿ, ಹಿರಿಯ ಕಾಂಗ್ರೆಸ್​ ಮುಖಂಡ ಬೈರೇಗೌಡ ಇತರರು ಇದ್ದರು.

Published on
ಚನ್ನರಾಯಪಟ್ಟಣ : ಗ್ರಾಮೀಣ ಭಾಗದಲ್ಲಿ ರೈತರಿಗೆ ಅಲ್ಪಾವಧಿ ಸಾಲ, ಕೃಷಿ ಪರಿಕರಗಳ ವಿತರಣೆ (ಬೀಜ, ಗೊಬ್ಬರ) ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವುದಲ್ಲದೆ, ಸಹಕಾರಿ ಸಂಸ್ಥೆಗಳಲ್ಲಿ ಠೇವಣಿ ಸಂಗ್ರಹಣೆ, ಪಡಿತರ ವಿತರಣೆ ಮತ್ತು ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಾ ಗ್ರಾಮೀಣ ಆರ್ಥಿಕತೆ ಬಲಪಡಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಹಿತ್ತರಹಳ್ಳಿ ರಮೇಶ್​ ಹೇಳಿದರು.
ದೇವನಹಳ್ಳಿ ತಾಲೂಕು ಬೂದಿಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು. ಹೊಸದಾಗಿ ನಿರ್ಮಿಸುವ ಸೊಸೈಟಿ ಕಟ್ಟಡಕ್ಕೆ 5 ಲಕ್ಷ ರೂ. ಬಿಡಿಸಿಸಿ ಬ್ಯಾಂಕ್​ನಿಂದ ಹಂಚಿಕೆ ಮಾಡಲಾಗುತ್ತದೆ.ಹಣಬೆ, ಹಸು, ಕೋಳಿ, ಕುರಿ, ಹಂದಿ ಸೇರಿ ಮುಂತಾದ ರೈತ ಉಪಯೋಗಿ ಪರಿಕರಗಳ ಅಭಿವೃದ್ಧಿಗೆ 15 ಲಕ್ಷ ರೂ. ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು.
ಬೂದಿಗೆರೆ ಸೊಸೈಟಿಗೆ ಗಂಗವಾರ ಚೌಡಪ್ಪನಹಳ್ಳಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ರೈತರ ಅಗತ್ಯ ಸೇವೆಯಿಂದ 2500 ಷೇರುದಾರಿದ್ದಾರೆ. ಲಾಭದಾಯಕವಾಗಿ ಸೊಸೈಟಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಬೂದಿಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಕೆ.ರಮೇಶ್​, ನಿರ್ದೇಶಕರಾದ ಶಂಕರಪ್ಪ, ಎಂ.ರಮೇಶ್​, ಎಂ.ರಾಜಣ್ಣ, ಕೃಷ್ಣಮೂರ್ತಿ, ವೆಂಕಟೇಶ್​, ಸೋಮಶೇಖರ್​, ಮುನಿರಾಜು, ಪ್ರಮೀಳಾ, ರಾಜಮ್ಮ, ಮಂಜುನಾಥ್​, ಲಕ್ಷಿ$್ಮ, ಸಿಇಒ ದೇವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net