ಪದವಿ ಪ್ರದಾನ ಸಮಾರಂಭ ನಾಳೆ

ಕಲಬುರಗಿ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಗುರುವಾರ ಗೋಷ್ಠಿಯಲ್ಲಿ ಹೈಕಶಿ ಸಂಸ್ಥೆ ಅಧ್ಯಕ್ಷ ಶಶೀಲ್​ ನಮೋಶಿ ಮಾತನಾಡಿದರು. ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಡಾ.ಅನಿಲ್​ ಪಟ್ಟಣ್​, ಡಾ.ಎಸ್​.ಆರ್​.ಹರವಾಳ್​, ಸಂಪತ್​ ಗಿಲ್ಡಾ.ಡಾ.ಕೈಲಾಶ ಪಾಟೀಲ್​ ಇತರರಿದ್ದರು.
ಕಲಬುರಗಿ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಗುರುವಾರ ಗೋಷ್ಠಿಯಲ್ಲಿ ಹೈಕಶಿ ಸಂಸ್ಥೆ ಅಧ್ಯಕ್ಷ ಶಶೀಲ್​ ನಮೋಶಿ ಮಾತನಾಡಿದರು. ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಡಾ.ಅನಿಲ್​ ಪಟ್ಟಣ್​, ಡಾ.ಎಸ್​.ಆರ್​.ಹರವಾಳ್​, ಸಂಪತ್​ ಗಿಲ್ಡಾ.ಡಾ.ಕೈಲಾಶ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೈ.ಕ.ಶಿ ಸಂಸ್ಥೆ ಅಧ್ಯಕ್ಷ ಶಶೀಲ್​ ನಮೋಶಿ ಮಾಹಿತಿ
  • ಪಿಡಿಎ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಆಯೋಜನೆ
ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಸ್ಯಾಕ್​ ಸಭಾಂಗಣದಲ್ಲಿ ಆ.29ರಂದು ಬೆಳಗ್ಗೆ 10ಕ್ಕೆ ಪದವಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್​ ನಮೋಶಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ 690 ಯುಜಿ ಮತ್ತು 39 ಪಿಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್​ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಕೆಆರ್​ಡಿಬಿ ಕಾರ್ಯದರ್ಶಿ ನಲೀನ್​ ಅತುಲ್​ ಅತಿಥಿಯಾಗಿದ್ದು, ಬೆಂಗಳೂರು ಮೂಲದ ಸುಮಿತ್​ ಕನ್ಸಲ್ಟಿಂಗ್​ನ ಮುಖ್ಯಸ್ಥರೂ ಆದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂದೀಪ ಶರ್ಮಾ ಗೌರವ ಅತಿಥಿಗಳಾಗಿದ್ದಾರೆ. ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ ಅಧಕ್ಷತೆ ವಹಿಸುವರು. ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ್​ ಸೇರಿ ಆಡಳಿತ ಮಂಡಳಿ ಸದಸ್ಯರು, ಗಣ್ಯರು ಭಾಗವಹಿಸುವರು ಎಂದು ಹೇಳಿದರು.

ದಾನೀಶ್​ ಚಿನ್ನದ ಹುಡುಗ

14ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚಿನ ಗ್ರೇಡ್​ ಪಾಯಿಂಟ್​ ಪಡೆದ ಕಂಪ್ಯೂಟರ್​ ಸೈನ್ಸ್​ ವಿಭಾಗದ ಅಬ್ದಲ್ಲಾ ದಾನೀಶ್​ 7 ಚಿನ್ನದ ಪದಕ ಪಡೆದಿದ್ದಾನೆ. ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ವಿಭಾಗದ ಪ್ರಜ್ವಲ್​ ಶಾಸಿ ಆರು ಚಿನ್ನದ ಪದಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿವಿಲ್​ ಇಂಜಿನಿಯರಿಂಗ್​ ವಿಭಾಗದ ಅಭಿಷೇಕ, ಎಲೆಕ್ಟ್ರಾನಿಕ್ಸ್​ ವಿಭಾಗದ ತಲ್ಹಾ ಸುಫಿಯಾನ್​, ಮೆಕ್ಯಾನಿಕಲ್​ ಇಂಜಿನಿಯರಿಂಗ್​ ವಿಭಾಗದ ತಲ್ಹಾ ಅಮನ್​ ಅಲಿ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಾಗರ ತಲಾ 2 ಚಿನ್ನದ ಪದಕ ಪಡೆದಿದ್ದಾರೆ. ವಿವಿಧ ವಿಭಾಗಗಳ 11 ವಿದ್ಯಾರ್ಥಿಗಳು ಕೂಡ ಚಿನ್ನದ ಪದಕ ಪಡೆದಿಕೊಂಡಿದ್ದಾರೆ. ಸಮಾರಂಭಕ್ಕಾಗಿ 450ಕ್ಕೂ ಹೆಚ್ಚು ಪದವಿಧರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅಭಿವೃದ್ಧಿ ಪಥದತ್ತ ಪಿಡಿಎ ಕಾಲೇಜು

ಮಹಾವಿದ್ಯಾಲಯದ ಟೆನಿಂಗ್​ ಮತ್ತು ಪ್ಲೇಸ್​ಮೆಂಟ್​ ಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ ತರಬೇತಿಗಾಗಿ 100ಕ್ಕೂ ಅಧಿಕ ಗಣಕಯಂತ್ರಗಳು ಒಂದೇ ಸೂರಿನಡಿ ಕಲ್ಪಿಸಿಕೊಡಲಾಗಿದೆ. ಡಿಜಿಟಲ್​ ಕ್ಲಾಸ್​ ರೂಂ ಒದಗಿಸಲಾಗಿದೆ. ಅಲ್ಲಿನ ಉದ್ಯಮ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಕೊಠಡಿಗಳು, ಉದ್ಯಮಿಗಳಿಗಾಗಿ ವಿಶ್ರಾಂತಿ ಕೋಣೆಗಳಿವೆ. ಪಿಡಿಎ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರಕಿಸಿಕೊಡಲಾಗಿದೆ ಎಂದು ನಮೋಶಿ ತಿಳಿಸಿದರು.
ಮಹಾವಿದ್ಯಾಲಯಕ್ಕೆ ಸೇರ್ಪಡೆಯಾದ ನೂತನ ಕೋರ್ಸ್​ ಆರ್ಟಿಫೀಸಿಯಲ್​ ಇಂಟಲಿಜೆನ್ಸ ಮತ್ತು ಡೇಟಾ ಸಾಯಿನ್ಸ್​ ಈ ಭಾಗದ ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶ ಕಲ್ಪಿಸಿಕೊಡುವ ನಿರೀೆ ಇದೆ. ಎಲೆಕ್ಟ್ರಿಕಲ್​ಮತ್ತು ಕಂಪ್ಯೂಟರ್​ ಸೈನ್ಸ್​ ಇಂಜಿನಿಯರಿಂಗ್​ ವಿಭಾಗಗಳಿಗೆ ಹೆಚ್ಚುವರಿ 60 ಸೀಟುಗಳ ಪರವಾನಿಗೆ ದೊರತ್ತಿದ್ದು, ಪ್ರವೇಶ ನೀಡಲಾಗುತ್ತಿದೆ ಎಂದರು.

ಸಂಶೋಧನಾ ಕೇಂದ್ರ ಸ್ಥಾಪನೆ

ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಜಾಗತಿಕ ಮಟ್ಟದ ಹಳೆಯ ವಿದ್ಯಾರ್ಥಿಗಳ ಬೃಹತ್​ ಸಮಾವೇಶದ ಗುರಿ ಈಡೇರಿಸಲು ಪಿಡಿಎ ಅಲುಮಿನಿ ರೀಸರ್ಚ್​ ಸೆಂಟರ್​ ಸ್ಥಾಪಿಸುವ ಉದ್ದೇಶವಿದ್ದು, ಆ ನಿಟ್ಟಿನಲ್ಲಿ ಯೋಜನೆ ರೂಪಿಸಿ ಶ್ರೀ ಕಾರ್ಯರೂಪಕ್ಕೆ ತರಲಾಗುವುದು ಎಂದರು. 1976ನೇ ಬ್ಯಾಚ್​ನ ಸುಮಾರು 20 ಜನ ಹಳೆಯ ವಿದ್ಯಾರ್ಥಿಗಳು ಇತ್ತೀಚಿಗೆ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮುಂಬರುವ ದಿನಗಳಲ್ಲಿ ತಾಂತ್ರಿಕ ಕಾರ್ಯಾಗಾರ, ಜಾಗತಿಕ ಮಟ್ಟದ ತಾಂತ್ರಿಕ ಸಂಶೋಧನಾ ಪ್ರಯೋಗಾಲಯ ಪ್ರಾರಂಭಿಸಲು ಸಕಲ ಸಿದ್ಧತೆ ನಡೆದಿದ್ದು,ಈ ನಿಟ್ಟಿನಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ್​, ಡಾ.ಎಸ್​.ಆರ್​.ಹರವಾಳ್​, ಡಾ.ಅನಿಲ್​ ಪಟ್ಟಣ್​, ಸಂಪತ್​ ಗಿಲ್ಡಾ, ಪ್ರಾಚಾರ್ಯ ಡಾ.ಎಸ್​.ಆರ್​.ಪಾಟೀಲ, ಉಪ&ಪ್ರಾಚಾರ್ಯ(ಶೈಕ್ಷಣಿಕ) ಡಾ.ಎಸ್​.ಆರ್​.ಹೊಟ್ಟಿ, ಉಪ&ಪ್ರಾಚಾರ್ಯ(ಆಡಳಿತ) ಡಾ.ಭಾರತಿ ಹರಸೂರ, ಪರೀಾ ನಿಯಂತ್ರಣಾಧಿಕಾರಿ ಡಾ.ವಿಜಯ ಹಿರೇಮಠ, ಉಪ&ಪರೀಾ ನಿಯಂತ್ರಣಾಧಿಕಾರಿ ಡಾ.ಪದ್ಮಪ್ರೀಯಾ ಪಾಟೀಲ, ಪತ್ರಿಕಾ ಸಮಿತಿ ಸದಸ್ಯರಾದ ಡಾ.ಬಾಬುರಾವ ಶೇರಿಕಾರ್​, ಪ್ರೊ.ಅಶೋಕ ಪಾಟೀಲ, ಪೊ.ಐ.ಕೆ.ಪಾಟೀಲ್​ ಇತರರಿದ್ದರು.
"

ಪಿಡಿಎ ತಾಂತ್ರಿಕ ಮಹಾವಿದ್ಯಾಲಯವು ವೆಕ್ಟರ್​ ಇನ್ಫಾರ್​ಮೇಟಿಕ್​ ಸಂಸ್ಥೆ ಜತೆ ವಿಶ್ವವಿದ್ಯಾಲಯ ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕಿದೆ. ಇಫಿನಿಯನ್​ ಇನ್ಫಾರ್​ಮೆಟಿಕ್ಸ್​ ಇಂಡಿಯಾ ಮತ್ತು ಧಾರವಾಡದ ಐಐಐಟಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಅದರಡಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತರಬೇತಿ ನೀಡಲಾಗುವುದು.

— > ಶಶೀಲ್​ ನಮೋಶಿ, ಅಧ್ಯಕ್ಷ, ಹೈಕಶಿ ಸಂಸ್ಥೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net