ಸಾವಕನಹಳ್ಳಿಯಲ್ಲಿ ನೀರಿನ ಘಟಕ ನಿರ್ಮಾಣಕ್ಕೆ ವಿವಾದ / DEVANAHALLI

ದೇವನಹಳ್ಳಿ ತಾಲೂಕಿನ ಕಸಬಾ ಬಿದಲೂರು ಗ್ರಾಪಂ ವ್ಯಾಪ್ತಿಯ ಸ್ಮಶಾನದ ಬಳಿಯ ನೀರಿನ ಟಕ ಮತ್ತು ಸ್ಮಶಾನ ಜಾಗದ ಮುಂದೆ ದಲಿತ ಮುಖಂಡರಾದ ಎಸ್​.ಪಿ. ಮುನಿಯಪ್ಪ, ಎಸ್​. ಸುರೇಶ್​ , ಗೊರಲಪ್ಪ, ಮುನಿರಾಜು ವೆಂಕಟೇಶ್​, ಮಧು, ಮುನಿಶಾಮಪ್ಪ ಇದ್ದರು.
ದೇವನಹಳ್ಳಿ ತಾಲೂಕಿನ ಕಸಬಾ ಬಿದಲೂರು ಗ್ರಾಪಂ ವ್ಯಾಪ್ತಿಯ ಸ್ಮಶಾನದ ಬಳಿಯ ನೀರಿನ ಟಕ ಮತ್ತು ಸ್ಮಶಾನ ಜಾಗದ ಮುಂದೆ ದಲಿತ ಮುಖಂಡರಾದ ಎಸ್​.ಪಿ. ಮುನಿಯಪ್ಪ, ಎಸ್​. ಸುರೇಶ್​ , ಗೊರಲಪ್ಪ, ಮುನಿರಾಜು ವೆಂಕಟೇಶ್​, ಮಧು, ಮುನಿಶಾಮಪ್ಪ ಇದ್ದರು.
Published on
ದೇವನಹಳ್ಳಿ : ತಾಲೂಕಿನ ಕಸಬಾ ಬಿದಲೂರು ಗ್ರಾಪಂ ವ್ಯಾಪ್ತಿಯ ಸ್ಮಶಾನದ ಬಳಿ ಬಮುಲ್​ ಸಹಕಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ವಿವಾದಕ್ಕೆ ಆಸ್ಪದವಾಗಿದೆ. ಘಟಕ ನಿರ್ಮಾಣಕ್ಕೆ ಗ್ರಾಮದ ಹಲವು ದಲಿತ ಕುಟುಂಬಗಳ ವಿರೋಧ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಎರಡು ಗುಂಪುಗಳ ನಡುವೆ ಟಕದ ಪರ&ವಿರೋಧದ ಜಗಳವಾಗಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.
ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳು ಸ್ಮಶಾನದಲ್ಲಿ ನೂರಾರು ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಿವೆೆ. ಇತ್ತೀಚೆಗೆ ಬೈಪಾಸ್​ ರಸ್ತೆ ಸರ್ವೀಸ್​ ರಸ್ತೆಗಾಗಿ ಸ್ವಲ್ಪ ಜಾಗ ಹೋಗಿ ಈಗ ನಾಲ್ಕು ಗುಂಟೆ ಉಳಿದಿದೆ. ಆದರೆ, ಈ ದಲಿತರ ಸ್ಮಶಾನದಲ್ಲಿಯೇ ನೀರಿನ ಟಕ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಸ್ಮಶಾನಕ್ಕೆ ಹೋಗಲು ಸಮಸ್ಯೆಯಾಗಿದೆ ಎಂದು ದಲಿತ ಮುಖಂಡ ಎಸ್​.ಪಿ. ಮುನಿಯಪ್ಪ ಆರೋಪಿಸಿದರು. ಇಲ್ಲಿ ಟಕ ನಿರ್ಮಾಣ ಬೇಡವೆಂದು ತಡೆಯಲು ಹೋದಾಗ ಜಗಳವಾಗಿದೆ. ಇದರಲ್ಲಿ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಶ್ವನಾಥಪುರ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಗ್ರಾಮದ ಮುನಿಶಾಮಪ್ಪ ಮಾತನಾಡಿ, ಸ್ಮಶಾನದಲ್ಲಿ ನಾವು ನೀರಿನ ಟಕ ನಿರ್ಮಾಣ ಮಾಡಲು ಬಿಡುವುದಿಲ್ಲ. ಪೂರ್ವಿಕರನ್ನು ಇಲ್ಲೇ ಸಮಾಧಿ ಮಾಡಲಾಗಿದೆ. ನೀರಿನ ಟಕ ಬೇರೆಡೆ ಸ್ಥಾಪಿಸಲಿ. ಈ ಬಗ್ಗೆ ಕಂದಾಯ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳಿಗೂ ದೂರು ನೀಡಿದ್ದು, ಅವರು ಬಂದು ಪರಶೀಲಿಸಿದ್ದಾರೆ ಎಂದರು.
ಬಮುಲ್​ ನಿರ್ದೇಶಕ ಎಸ್​.ಪಿ. ಮುನಿರಾಜು ಮಾತನಾಡಿ, ಟಕವನ್ನು ರಸ್ತೆ ಬದಿ ಮಾಡಲಾಗುತ್ತಿದೆ ಹೊರತು ಸ್ಮಶಾನದಲ್ಲಿ ಅಲ್ಲ. ನಾವು ಟಕ ಕೂರಿಸಿದ ಮೇಲೆ ಅದರ ಪಕ್ಕ ಶವ ಸಂಸ್ಕಾರ ಮಾಡಿದ್ದಾರೆ. ಬಮುಲ್​ನಿಂದ ಫಿಲ್ಟರ್​ ಕೊಡುತ್ತಿದ್ದೇವೆ. ಪಂಚಾಯತಿಯಿಂದ ಕಟ್ಟಡ ನಿರ್ಮಿಸಿಕೊಡುತ್ತಾರೆ. ಇದು ನನಗಾಗಿ ಅಲ್ಲ, ಗ್ರಾಮಸ್ಥರ ಒಳಿತಿಗಾಗಿ. ಆದರೆ, ಕೆಲವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆ ಜಾಗದ ಬಳಿ ದಾನಿಗಳು ಕೊರೆಸಿದ ಕೊಳವೆಬಾವಿಯಲ್ಲಿ ಸಾಕಷ್ಟು ನೀರು ಲಭ್ಯವಾಗಿದ್ದು, ಅನಿಟ್ಟ ಹಾಗೂ ಸಾವಕನಹಳ್ಳಿ ಜನರ ಅನುಕೂಲಕ್ಕಾಗಿ ಗ್ರಾಪಂ ಮಾಜಿ ಅಧ್ಯಕ್ಷರು ನೀರಿನಟಕ ನಿರ್ಮಸಿತ್ತೇವೆಂದು ಕೇಳಿದಾಗ ಸಾರ್ವಜನಿಕ ಹಿತಾಸಕ್ತಿಯಿಂದ ಪಂಚಾಯಿತಿ ಅನುಮತಿ ನೀಡಿದೆ. ಆದರೆ, ಅದು ಜಾಗ ಯಾವುದು ಎಂಬುದನ್ನು ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ನಿರ್ಧರಿಸಬೇಕು.

— > ಸಿದ್ದರಾಜು, ಪಿಡಿಒ

ಈ ಬಗ್ಗೆ ದೂರು ಬಂದಿದೆ. ಆರ್​ಐ ಮತ್ತು ವಿಎಗಳನ್ನು ಕಳುಹಿಸಿ ಪರಿಶೀಲಿಸಿದಾಗ ನೀರಿನ ಟಕ ಮಾಡುತ್ತಿರುವ ಜಾಗ ಸ್ಮಶಾನಕ್ಕೆ ಸೇರಿದ್ದಲ್ಲ ಎಂದು ಕಂಡು ಬಂದಿದೆ. ಸ್ಮಶಾನ ಅದರ ಹಿಂದೆಕ್ಕೆ ಇದೆ. ಆದರೂ ಮತ್ತೊಮ್ಮೆ ಪರಿಶೀಲಿಸಲಾಗುವುದು.

— > ಎಂ. ಅನಿಲ್​, ತಹಸೀಲ್ದಾರ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net