ತಾಲೂಕಿನ ಸಿಎಸ್ ಪುರ ಹೋಬಳಿಯ ಸಿ.ಕೊಡಗೇಹಳ್ಳಿಯ ರೈತರ ತೋಟವೊಂದಲ್ಲಿ ಹಮ್ಮಿಕೊಂಡಿದ್ದ ತೆಂಗಿನ ತೋಟಕ್ಕೆ ಡ್ರೋನ್ ಮುಖಾಂತರ ಬೇವಿನ ಎಣ್ಣೆ ಸಿಂಪಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ತೆಂಗಿನ ತೋಟಗಳಲ್ಲಿ ಎಲೆ ತಿನ್ನುವ ಕಪ್ಪು ತಲೆಯ ಹುಳುಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇವಿನ ಎಣ್ಣೆ ಸಿಂಪಡಣೆಯಿಂದ ನುಸಿ ರೋಗ ಸೇರಿ ಎಲೆ ತಿನ್ನುವ ಹುಳುಗಳ ಕಾಟವನ್ನು ನಿಯಂತ್ರಿಸಬಹುದು ಎಂದರು. ಪ್ರಾತ್ಯಕ್ಷಿಕೆ ಫಲಿತಾಂಶ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಿ ಕೊಡಗೇಹಳ್ಳಿಯ ರೈತರ ತೋಟಗಳಿಗೂ ಬೇವಿನ ಎಣ್ಣೆ ಸಿಂಪಡಿಸುವ ಕಾರ್ಯ ಯೋಜನೆ ರೂಪಿಸಕಾಗುವುದು ಎಂದು ತಿಳಿಸಿದರು.