ಹೊಸಕೋಟೆ ತಾಲೂಕು ನಂದಗುಡಿ ಕೆಪಿಎಸ್ನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ಎನ್.ಗಂಗಾಧರ್, ಎಸ್ಡಿಎಂಸಿ ಉಪಾಧ್ಯಕ್ಷ ಎನ್.ಎಚ್.ಅನಿಲ್ಕುಮಾರ್, ಭೂ ನ್ಯಾಯಮಂಡಳಿ ಸದಸ್ಯ ಪಿ.ವೀರರಾಜು, ಎಸ್ಎಫ್ಸಿಎಸ್ನ ನಿರ್ದೇಶಕ ಎಂನಾಗೇಶ್, ಪ್ರತಿನಿಧಿಗಳಾದ ಪುಷ್ಪಾವತಿ ಸಿ.ಮೂರ್ತಿ ಇತರರಿದ್ದರು.
Published on:
Copied
Follow Us
ನಂದಗುಡಿ : ಶಾಲಾ ಶಿಕ್ಷಣದ ಸಾರ್ವತ್ರೀಕರಣ ಬೇಡಿಕೆ ಸಾಕಾರಗೊಳ್ಳಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ನಿರ್ಣಾಯಕ ಪಾತ್ರವಹಿಸುತ್ತದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಉಳಿವಿನ ಕೀರ್ತಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಸಲ್ಲುತ್ತದೆ ಎಂದು ನಿಕಟಪೂರ್ವ ಎಸ್ಡಿಎಂಸಿ ಉಪಾಧ್ಯಕ್ಷ ಎನ್.ಗಂಗಾಧರ್ ಹೇಳಿದರು.
ಕೆಪಿಎಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಪಾಲಕರು ಒಂದೇ ದಿಕ್ಕಿನಲ್ಲಿ ವಿಚಾರ ಮಾಡಿದರೇ ಆ ಶಾಲೆ ನಂದನವಾಗುತ್ತದೆ. ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತಿದೆ. ಅಂತೆಯೇ ಪಾಲಕರು ಖಾಸಗಿ ಶಾಲೆ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷ ಎನ್.ಎಚ್.ಅನಿಲ್ಕುಮಾರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಲು ಸಾಧ್ಯ. ಪಾಲಕರು ಶಿಕ್ಷಕರಿಗೆ ಸಹಕಾರ ನೀಡಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬಹುದು. ಸರ್ಕಾರ ಯೋಜನೆಗಳನ್ನು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.