ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ government schools

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ government schools
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ government schools
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಮನವಿ
  • ಅಲಕಾಪುರ ಪ್ರೌಢಶಾಲೆಯಲ್ಲಿ ಸ್ಮಾರ್ಟ್​ಕ್ಲಾಸ್​ ರೂಂಗೆ ಚಾಲನೆ
ಗೌರಿಬಿದನೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂ&ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ ಹೇಳಿದರು.government schools
ತಾಲೂಕಿನ ಅಲಕಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕೆನಾ ಮೆಟಲ್​ ಮತ್ತು ಇಂಡಿಯನ್​ ಲಿಟರಸಿ ಪ್ರಾಜೆಕ್ಟ್​ಯಿಂದ ಹಮ್ಮಿಕೊಂಡಿದ್ದ ಸ್ಮಾರ್ಟ್​ ಕ್ಲಾಸ್​ ರೂಂ ಮತ್ತು ವಿಜ್ಞಾನ ಪ್ರಯೋಗಕ್ಕೆ ಸಂಪನ್ಮೂಲಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಗಳು, ದಾನಿಗಳು, ಸಮಾಜದ ಸಹಭಾಗಿತ್ವದಿಂದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿ ಪಡಿಸಬಹುದು. ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೇರಿ ವಿವಿಧ ಸಂಪನ್ಮೂಲಗಳನ್ನು ಕಲ್ಪಿಸಿದಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸಿ ಉತ್ತಮ ಫಲಿತಾಂಶ ಪಡೆಯಬಹುದು. ಈ ನಿಟ್ಟಿನಲ್ಲಿ ಕೆನಾಮೆಟಲ್​ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕೆಲಸಗಳು ಇತರರಿಗೆ ಮಾದರಿಯಾಗಿವೆ ಎಂದರು.
ಇಂಡಿಯನ್​ ಲಿಟ್ರಸಿ ಪ್ರಾಜೆಕ್ಟ್​ ಸಂಸ್ಥೆ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್​ ಮಾತನಾಡಿ, ಸಂಸ್ಥೆಯು ಡಿಎಸ್​ಸಿಆರ್​ಟಿಯಿಂದ ಎಂಒಯು ಮಾಡಿಕೊಂಡು ರಾಜ್ಯದ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿದೆ. ಕಂಪ್ಯೂಟರ್​ ಲ್ಯಾಬ್​ಗಳಲ್ಲಿ ಓಎಸ್​ ಅಪ್ಡೇಟ್​ ಮಾಡುವುದು, ಶಿಕ್ಷಕರಿಗೆ ತರಬೇತಿ ನೀಡುವುದು, ಮಕ್ಕಳಿಗೆ ಟೂಲ್ಸ್​ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ವೃತ್ತಿ ಮಾರ್ಗದರ್ಶನದ ಬಗ್ಗೆ ಮಕ್ಕಳಿಗೆ ಅರಿವು ಮೂಡುವ ಕಾರ್ಯಕ್ರಮ ಮಾಡುತ್ತಿದೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3 ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್​ ಕ್ಲಾಸ್​ ರೂಂ ಮತ್ತು ವಿಜ್ಞಾನ ಪ್ರಯೋಗಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.
ಕೆನಾ ಮೆಟಲ್​ ಸಂಸ್ಥೆ ಜನರಲ್​ ಮ್ಯಾನೇಜರ್​ರವಿಪ್ರಕಾಶ್​ ಮಾತನಾಡಿ, ಹಿಂದುಳಿದ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ. ಇದನ್ನು ಇಂಡಿಯನ್​ ಲಿಟ್ರೇಸಿ ಪ್ರಾಜೆಕ್ಟ್​ ಸಂಸ್ಥೆ ನೆರವೇರಿಸುತ್ತಿದೆ ಎಂದರು.
ಮುಖ್ಯಶಿಕ್ಷಕನಂಜುಂಡ ರಾವ್​, ಉಮಾಶಂಕರ್​, ಇಮ್ತಿಯಾಜ್​, ಶ್ರೀನಿವಾಸಪ್ಪ, ಗಂಗಾಧರಯ್ಯ, ಸುಮಲತಾ, ಅರುಣಾ, ಸೌಮ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net