ವಕೀಲರ ಸಂಘದ ಅಧ್ಯಕ್ಷ ಎನ್.ಸತೀಶ್ ಕುಮಾರ್ ಮಾತನಾಡಿ, ಜೀತಪದ್ಧತಿ ಮೇಲ್ನೋಟಕ್ಕೆ ನಿಮೂರ್ಲನೆಯಾದರೂ ಪರೋಕ್ಷವಾಗಿ ಉಲ್ಬಣಗೊಳ್ಳುತ್ತಿದೆ. ಕೋಳಿ ಫಾಮ್ರ್ಗಳಲ್ಲಿ, ಕಲ್ಲು ಗಣಿಗಾರಿಕೆ, ಇಟ್ಟಿಗೆ ಕಾರ್ಖಾನೆಗಳು ಮತ್ತಿತರ ಕಡೆ ಬೇರೆ ಬೇರೆ ರಾಜ್ಯದವರನ್ನು ಕೆಲಸಕ್ಕೆ ಇಟ್ಟುಕೊಂಡು ವಾಸಿಸಲು ಯೋಗ್ಯವಲ್ಲದ ಮನೆ, ಆಹಾರ ಧಾನ್ಯಗಳು, ಬಿಡಿ ಸಿಗರೇಟ್ ಮಧ್ಯ ಮತ್ತಿತರ ವಸ್ತುಗಳನ್ನು ನೀಡುವ ಮೂಲಕ ಪರೋಕ್ಷ ಜೀತಗಾರಿಕೆ ನಡೆಯುತ್ತಿದೆ. ಇವರಿಗೆ ಸ್ಥಳಿಯವಾಗಿ ನಕಲಿ ದಾಖಲೆ ಸೃಷ್ಟಿ ಮಾಡಿಕೊಡಲಾಗಿದೆ ಇಂಥ ಪ್ರಕರಣವನ್ನು ಕಾರ್ಮಿಕ ಇಲಾಖೆ, ಜಿಲ್ಲಾ ಮತ್ತು ತಾಲೂಕ ಆಡಳಿತ ಗಮನ ಹರಿಸಬೇಕೆಂದು ಒತ್ತಾಯಿಸಿದರು.