ಜೆಸಿಐ ಹಾಸನ ಹೇಮಾವತಿ ರಿಜಿನ್ ಸಿ, ಜೋನ್-14ರ 2026ನೇ ಸಾಲಿನ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಕ್ಷೀರ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಜಿತೇಶ್ ಅದ್ವಾನಿ, ವಿಮಲ್ ರಾಜ್ ಜಿ, ಕೆಪಿಎಸ್ ಪ್ರಮೋದ್, ಉಮಾಮಹೇಶ್, ಎಸ್.ಪ್ರದೀಪ್, ಕೆ.ವಿ.ತ್ಯಾಗರಾಜು ಇತರರಿದ್ದರು.
Published on:
Copied
Follow Us
ಹಾಸನ: ಜೆಸಿಐ ಹಾಸನ ಹೇಮಾವತಿ ರಿಜಿನ್ ಸಿ, ಜೋನ್-14ರ 2026ನೇ ಸಾಲಿನ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಕ್ಷೀರ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಜೆಸಿಐ ಇಂಡಿಯಾದ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜಿತೇಶ್ ಅದ್ವಾನಿ ಪ್ರಮಾಣವಚನ ಬೋಧಿಸಿ, ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು. ಉದ್ಘಾಟಕರಾದ ಜೋನ್-14ರ ಅಧ್ಯಕ್ಷ ಜೆಸಿ ಪ್ರಜ್ವಲ್ ಎಸ್. ಜೈನ್ ನೂತನ ಅಧ್ಯಕ್ಷ ವಿಮಲ್ ರಾಜ್‌ಜಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ವಿಮಲ್‌ರಾಜ್ ಜಿ ಮಾತನಾಡಿ, ಸಮಾಜಮುಖಿ ಸೇವಾ ಕಾರ್ಯಕ್ರಮ, ಯುವಜನರಿಗೆ ತರಬೇತಿ, ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಎಸ್ ಪ್ರಮೋದ್, ಉಮಾಮಹೇಶ್, ಎಸ್.ಪ್ರದೀಪ್, ಕೆ.ವಿ.ತ್ಯಾಗರಾಜು, ಕೆ.ಸತೀಶ್, ಬಿ.ವಿ.ಸುಜಯ್ ಕುಮಾರ್, ಫರ್ಜಾನ ಕನುಮ್, ಗುರುಪ್ರಸಾದ್ ಕಾಮತ್, ಎಚ್.ವಿ.ವಿಕಾಸ್, ಎಸ್.ಸುನಿಲ್ ಕುಮಾರ್ ಇತರರಿದ್ದರು.