ಅಧ್ಯಯನ ನಿರಂತರವಾಗಿರಲಿ -ಡಾ ಸಿ ಸೋಮಶೇಖರ

photo
photo
Published on
ಕಲಬುರಗಿ : ಓದು ನಿರಂತರವಾದರೆ ಜ್ಞಾನ ಮತ್ತು ಪರೀಕ್ಷೆ ಫಲಿತಾಂಶ ಉತ್ತಮವಾಗುತ್ತದೆ. ಸಾಧನೆಗೆ ಬಡತನ ಅಡ್ಡಿ ಬರಬಾರದು ಜ್ಞಾನದ ಹಸಿವು ಮಕ್ಕಳಲ್ಲಿ ಇದ್ದಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ .ಸಿ. ಸೋಮಶೇಖರ ಹೇಳಿದರು.
ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳು ಓದಿನ ಕಡೆ ಗಮನ ಕೊಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಹಾಗೂ ಯಶಸ್ವಿಯಾಗಲು ಶಿಕ್ಷಕರ ಶ್ರಮ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಚ್. ನಿರಗುಡಿವಹಿಸಿ ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಗುರಿ ಮುಟ್ಟುವ ಕಡೆ ಪ್ರಯತ್ನ ಮಾಡಿ ಮುಂದಿನ ಭವಿಷ್ಯ ಉಜ್ವಲ ಮಾಡಿಕೊಳ್ಳಿ ಮೋಬೈಲ್ನಿಂದ ದೂರವಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಲ್ಯಾಣರಾವ ಶೀಲವಂತ ಅವರು ಮಾತನಾಡುತ್ತಾ ಮಕ್ಕಳು ತರಗತಿಯಲ್ಲಿ ಉಪನ್ಯಾಸಕರು ಹೇಳಿದ ವಿಷಯಗಳನ್ನು ಸರಿಯಾಗಿ ಮನನ ಮಾಡಿಕೊಂಡು ಓದಿದಾಗ ನಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ವಿದ್ಯರ್ಥಿಗಳಲ್ಲಿ ಕನಸು ದೊಡ್ಡದಾಗಿರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾದ

ದಿಶಾ ಪಿಯು ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರಿ ವೇದಿಕೆ ಮೇಲೆ ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆ ವಿಧ್ಯಾರ್ಥಿನಿ ಮೇಘನಾ ಹಾಗೂ ಸಂಜೀವಿನಿ ಮಾಡಿದರು. ಅಂಜಲಿ ಹಾಗೂ ಮಸೆಮ್ಮ ಪ್ರಾರ್ಥನೆ ಮಾಡಿದರು.ಸ್ನೇಹಾ ಸ್ವಾಗತ ಮಾಡಿದರು .ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮಹೇಶ್ ಗಡಗಿ, ಸಂತೋಷ ಪಿಳ್ಳೆ , ಕಾಶೀನಾಥ್ ಪಂಚಾಳ ಸಚ್ಚಿದಾನಂದ ಪಾಟೀಲ್,ರೂಪಾ ಕುಲಕರ್ಣಿ, ರಾಜೇಶ್ವರಿ ಸಾಲಿಮಠ, ನಿರ್ಮಲಾ ಕಣ್ಮುಸೆ, , ವಿಶ್ವಜೋತಿ ಮಠ, ಡಾ ಸುಲೋಚನಾ ಅಂಕಲಗಿ ಇದ್ದರು.ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಫೈಲ್, ಪೆನ್ನು ನೀಡಲಾಯಿತು.
"

ವಿದ್ಯಾರ್ಥಿಗಳು ಶಿಸ್ತು ಸಂಯಮ ರೂಢಿಸಿಕೊಂಡು ಮೌಲ್ಯಯುತವಾಗಿ ಬದುಕುವುದನ್ನು ಕಟ್ಟಿಕೊಳ್ಳಬೇಕು ಹಾಗು ತಂದೆ ತಾಯಿಗಳ ಪ್ರೀತಿಗೆ ಪಾತ್ರರಾಗಿ ಸಂಸ್ಥೆಗೆ ಹೆಸರು ಬರುವಂತೆ ಅಭ್ಯಾಸ ಮಾಡಿ , ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆದು ಒಳ್ಳೆಯ ಫಲಿತಾಂಶ ಪಡೆಯಲು ಶ್ರಮವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಶಿವಾನಂದ ಖಜೂರಗಿ.

ಅಧ್ಯಕ್ಷರು ದಿಶಾ ವಿಜ್ಞಾನ ಪದವಿ ಪೂರ್ವ ಕಾಲೇಜು ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net