ಗ್ರಾಹಕ ಚಿಂತಾಮಣಿ ತಾಲೂಕಿನ ರಾಗಿಮಾಕಲಹಳ್ಳಿಯ ಖ.ಗಿ.ಪ್ರಭು ನೀಡಿದ ದೂರಿನ ವಿಚಾರ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಕುಮಾರ್ ಮತ್ತು ಸದಸ್ಯ ಎಚ್.ಜನಾರ್ದನ್ ದಂಡದ ಆದೇಶ ಹೊರಡಿಸಿದ್ದಾರೆ. ಗ್ರಾಹಕರು ಪ್ರೇರಣಾ ಮೋಟರ್ ಪ್ರೈವೆಟ್ ಲಿಮಿಟೆಡ್ ಹಾಗೂ ಟಾಟಾ ಮೋಟರ್ ಪ್ಯಾಸೇಂಜರ್ ವೆಹಿಕಲ್ಸ್ ಲಿಮಿಟೆಡ್ ಸಂಸ್ಥೆಯ ಮೂಲಕ ವಾಹನವನ್ನು ಖರೀದಿಸಿದ್ದು ಇದು ಪದೇ ಪದೇ ರಿಪೇರಿಯಾಗುತ್ತಿರುವುದನ್ನು ಸಂಬಂಧಪಟ್ಟ ಸಂಸ್ಥೆಯ ಗಮನಕ್ಕೆ ತಂದಿದ್ದರು. ಆಯೋಗಕ್ಕೂ ದೂರು ಸಲ್ಲಿಸಿದ್ದರು. ಸೇವಾ ನ್ಯೂನ್ಯತೆ ಎಸಗಿದ ಹಿನ್ನೆಲೆಯಲ್ಲಿ 25,000 ರೂ ದಂಡ ಮತ್ತು ದಾವೆ ವೆಚ್ಚ 8000 ರೂಗಳನ್ನು ಗ್ರಾಹಕರಿಗೆ ನೀಡಬೇಕು. ಕೂಡಲೇ ವಾಹನವನ್ನು ರಿಪೇರಿ ಮಾಡಿಕೊಡಬೇಕೆಂದು ಆದೇಶಿಸಿದ್ದಾರೆ.